ಲಂಡನ್: ಜಾಗತಿಕ ಆರ್ಥಿಕತೆ 1930 ರಲ್ಲಿ ಎದುರಾಗಿದ್ದ ಗ್ರೇಟ್ ಡಿಪ್ರೆಷನ್(ಮಹಾ ಆರ್ಥಿಕ ಕುಸಿತ)ದ ಮಾದರಿಯ ಪರಿಸ್ಥಿತಿ ಅಂಚಿನಲ್ಲಿದೆ ಎಂದು ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಎದುರಾಗಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟು ಪರಿಸ್ತಿ ಪುನರಾವರ್ತನೆಯಾಗದಂತೆ ತಡೆಗಟ್ಟಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ರಘುರಾಮ್ ರಾಜನ್ ವಿಶ್ವದಾದ್ಯಂತ ಇರುವ ಕೇಂದ್ರೀಯ ಬ್ಯಾಂಕ್ ಗಳಿಗೆ ಕರೆ ನೀಡಿದ್ದಾರೆ.
ಲಂಡನ್ ನಲ್ಲಿ ನಡೆಯುತ್ತಿರುವ ಬಿಸಿನೆಸ್ ಸ್ಕೂಲ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ಮಾತನಾಡಿರುವ ರಘುರಾಮ್ ರಾಜನ್, 1930 ರಲ್ಲಿದ್ದ ಸಮಸ್ಯೆಗಳನ್ನು ಮತ್ತೆ ಎದುರಿಸುವ ಸ್ಥಿತಿಗೆ ನಿಧಾನವಾಗಿ ಜಾರುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತಮ ಪರಿಹಾರ ಕಂಡುಕೊಳ್ಳಲು ನಿಯಮಾವಳಿಗಳ ಅಗತ್ಯವಿದೆ ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಕೇಂದ್ರ ಬ್ಯಾಂಕ್ ಗಳ ಕಾರ್ಯಚಟುವಟಿಕೆ ಬಗ್ಗೆ ನಿಯಮಾವಳಿಗಳ ಕುರಿತಂತೆ ಚರ್ಚೆ ನಡೆಸಲು ಇದು ಸೂಕ್ತ ಕಾಲ ಎಂದು ಆರ್.ಬಿ.ಐ ಗೌರ್ನರ್ ಹೇಳಿದ್ದಾರೆ.
2008 ರಲ್ಲಿ ಅಮೆರಿಕಾದಲ್ಲಿ ಉಂಟಾಗಿದ್ದ ಆರ್ಥಿಕ ಕುಸಿತವನ್ನೂ ರಘುರಾಮ್ ರಾಜನ್ ಊಹಿಸಿದ್ದರು, ಮಹಾ ಆರ್ಥಿಕ ಕುಸಿತದ ಮಾದರಿಯ ಪರಿಸ್ಥಿತಿ ಅಂಚಿನಲ್ಲಿರುವ ಆರ್ಥಿಕತೆಯಿಂದ ಜಾಗತಿಕ ಮಟ್ಟದಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.