ವಾಣಿಜ್ಯ

ರಿಲಯನ್ಸ್ ಕಂಪನಿಗೆ ರು.1 ಕೋಟಿ ದಂಡ

Mainashree

ನವದೆಹಲಿ: ಗುಜರಾತ್ ನ ರಾಜಕೋಟ್ ಮುನ್ಸಿಪಲ್ ಕಾರ್ಪೋರೇಶನ್ ರಿಲಯನ್ಸ್ ಕಂಪನಿಗೆ 1 ಕೋಟಿ ರು. ದಂಡ ವಿಧಿಸಿದೆ.

ಕೇಬಲ್ ಅಳವಡಿಕೆಗೆ ನೀಡಿದ್ದ ಪರವಾನಗಿ ದುರುಪಯೋಗ ಪಡಿಸಿಕೊಂಡ ಹಿನ್ನಲೆಯಲ್ಲಿ ಗುಜರಾತ್ ನ ರಾಜಕೋಟ್ ಮುನ್ಸಿಪಲ್ ಕಾರ್ಪೋರೇಶನ್ ರಿಲಯನ್ಸ್ ಕಂಪನಿಗೆ ರು.1 ಕೋಟಿ ದಂಡ ವಿಧಿಸಿದ್ದು, ಮಾರ್ಚ್ 15ರೊಳಗೆ ಹಣ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ನೆಲದ ಒಳಗೆ ಒಂದು ಕೇಬಲ್ ಅಳವಡಿಕೆಗೆ ಅನುಮತಿ ಪಡೆದಿದ್ದ ರಿಲಯನ್ಸ್ ಕಂಪನಿ ಗುತ್ತಿಗೆದಾರರು ಎರಡು ಕೇಬಲ್ ಗಳನ್ನು ಹಾಕಿದ್ದರು. ಒಂದು ಕೇಬಲ್ ಸ್ಥಳೀಯ ಇಂಟರ್ ನೆಟ್ ಪೂರೈಕೆದಾರದ್ದು ಎನ್ನಲಾಗಿದೆ.

ಇದು ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಮುನ್ಸಿಪಲ್ ಕಾರ್ಪೋರೇಶನ್, 2014 ಡಿಸೆಂಬರ್ ಹಾಗೂ 2015 ಜನವರಿಯಲ್ಲಿ ರಿಲಯನ್ಸ್ ಗೆ ಎರಡು ನೋಟಿಸ್ ನೀಡಿತ್ತು. ಆದರೆ ನೋಟೀಸ್ ಗೆ ಉತ್ತರಿಸದ ಕಾರಣ ನೋಟೀಸ್ ನೀಡಲಾಗಿದೆ ಎಂದು ಮುನ್ಸಿಪಲ್ ಕಾರ್ಪೋರೇಶನ್ ಆಯುಕ್ತರು ತಿಳಿಸಿದ್ದಾರೆ.


SCROLL FOR NEXT