ಸನ್ ಷೇರು ಮಾರಾಟವಿಲ್ಲ
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ಗೆ ಸನ್ ನೆಟ್ವರ್ಕ್ನ ಷೇರುಗಳನ್ನು ಮಾರಾಟ ಮಾಡುವುದಿಲ್ಲ....
ಚೆನ್ನೈ/ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ಗೆ ಸನ್ ನೆಟ್ವರ್ಕ್ನ ಷೇರುಗಳನ್ನು ಮಾರಾಟ ಮಾಡುವುದಿಲ್ಲ. ಈ ಬಗ್ಗೆ ಚಾಲ್ತಿಯಲ್ಲಿರುವ
ಮಾಹಿತಿ ಸತ್ಯವಲ್ಲ ಎಂದು ಸನ್ ಗ್ರೂಪ್ನ ಮುಖ್ಯ ಹಣಕಾಸು ಅಧಿಕಾರಿ ಎಸ್.ಎಲ್ .ನಾರಾಯಣ್ ತಿಳಿಸಿದ್ದಾರೆ. ಷೇರು ಮಾರಾಟದ ಬಗೆಗಿನ ವರದಿ ದೇಶದ ವಾಣಿಜ್ಯ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿತು. ಸ್ಪೆಕ್ಟ್ರಂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಡಿಎಂಕೆ ನಾಯಕರ ಕುಟುಂಬಕ್ಕೆ ಈ ಮಾಹಿತಿ ಆಘಾತ ತಂದಿಟ್ಟಿತು. ಸುದ್ದಿ ಎಲ್ಲಿಯ ವರಗೆ ಹೋಯಿತೆಂದರೆ ಬಾಂಬೆ ಷೇರು ಪೇಟೆ ಕೂಡ ಸನ್ ಗ್ರೂಪ್ನಿಂದ ಸ್ಪಷ್ಟನೆ ಬಯಸಿತು. ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರೀಸ್ ನೆಟ್ ವರ್ಕ್ 18 ಅನ್ನು ಖರೀದಿಸಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.