ನವದೆಹಲಿ: ಭಾರತದ ವಿದೇಶಿ ಸಾಲ ರು.28,87,500 ಕೋಟಿಗೆ ಏರಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾಲದ ಪ್ರಮಾಣ ಶೇ.3.5ರಷ್ಟು ಹೆಚ್ಚಿದೆ.
2014 ಡಿಸೆಂಬರ್ ಅಂತ್ಯದಲ್ಲಿ ಇದ್ದ ವಿದೇಶಿ ಸಾಲದ ವಿವರವನ್ನು ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಪ್ರಕಟಿಸಿದೆ. 2014 ಡಿಸೆಂಬರ್ ಅಂತ್ಯದಲ್ಲಿ 461.9 ಬಿಲಿಯನ್ ಡಾಲರ್ (ಇಂದಿನ ವಿನಿಮಯ ದರದಲ್ಲಿ ರು.28.87 ಲಕ್ಷ ಕೋಟಿ)ಗೆ ಏರಿದೆ.
ಹಿಂದಿನ ವರ್ಷ ಈ ಪ್ರಮಾಣ 446.5 ಬಿಲಿಯನ್ ಡಾಲರ್ ಇತ್ತು. ವಿದೇಶಿ ಸಾಲದ ಪ್ರಮಾಣ ಒಟ್ಟು ರಾಷ್ಟ್ರೀಯ ಉತ್ಮನ್ನದ (ಜಿಡಿಪಿ) 23.7 ರಷ್ಟಿದೆ.
ಕಳೆದ ವರ್ಷದ ಅವಧಿಯಲ್ಲಿದ್ದ ದೀರ್ಘಾವಧಿ ಸಾಲ ಶೇ.6.7ರಷ್ಟು ಏರಿದೆ. ಅಲ್ಪಾವಧಿ ಸಾಲದ ಪ್ರಮಾಣ ಶೇ.6.1ರಷಅಟು ತಗ್ಗಿದೆ. ಈ ಪೈಕಿ ಡಾಲರ್ ರೂಪದಲ್ಲಿ ಪಡೆದ ಸಾಲದ ಪ್ರಮಾಣ ಶೇ.58.7 ಇದ್ದರೆ, ರುಪಾಯಿಯಲ್ಲಿ ಪಡೆದ ಸಾಲ ಶೇ.26.4ರಷ್ಟಿದೆ.