ಷೇರು ಮಾರುಕಟ್ಟೆ 
ವಾಣಿಜ್ಯ

ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಪ್ರಪಾತಕ್ಕೆ ಕುಸಿದ ಷೇರುಗಳು

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎರಡನೇ ಭಾರಿಗೆ ದೊಡ್ಡ ಪ್ರಮಾಣದಲ್ಲಿ ಷೇರುಗಳು ಪ್ರಪಾತಕ್ಕೆ ಕುಸಿದಿವೆ...

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎರಡನೇ ಭಾರಿಗೆ ದೊಡ್ಡ ಪ್ರಮಾಣದಲ್ಲಿ ಷೇರುಗಳು ಪ್ರಪಾತಕ್ಕೆ ಕುಸಿದಿವೆ. ಅಮೆರಿಕ, ಚೀನ ಹಾಗೂ ಐರೋಪ್ಯ ವಲಯದ ಆರ್ಥಿಕತೆಯಲ್ಲಿ ಕಂಡು ಬಂದಿರುವ ಏರುಪೇರು, ಅಸ್ಥಿರತೆಯ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಗಳಲ್ಲೂ ಭಾರೀ ಕುಸಿತ ಕಂಡಿದೆ.

ಬುಧವಾರ ಅಂತ್ಯದ ವೇಳೆ ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್‌ 722.77 ಅಂಕಗಳ ಭಾರೀ ಕುಸಿತವನ್ನು ಕಂಡಿದೆ. ಇದೇ ರೀತಿ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ 227.80 ಅಂಕಗಳ ಕುಸಿತವನ್ನು ಕಂಡಿದೆ.

722.77 ಅಂಕಗಳ ಕುಸಿತದೊಂದಿಗೆ (ಶೇ.2.6 ನಷ್ಟ) 26,717.37 ಅಂಕಗಳಲ್ಲಿ ಸ್ಥಿರವಾಗಿದೆ. ಅದೇ ರೀತಿ ನಿಫ್ಟಿ 227.80 ಅಂಕಗಳ ಕುಸಿತದೊಂದಿಗೆ (ಶೇ.2.7 ನಷ್ಟ) 8097.00 ಅಂಕಗಳಲ್ಲಿ ಸ್ಥಿರವಾಗಿದೆ. ಬುಧವಾರ ಕೇವಲ 599 ಕಂಪೆನಿಗಳ ಶೇರುಗಳು ಮುನ್ನಡೆ ಸಾಧಿಸಿದ್ದು 2,143 ಕಂಪೆನಿಗಳ ಶೇರುಗಳು ಕುಸಿತವನ್ನು ಕಂಡವು. 158 ಕಂಪೆನಿಗಳ ಶೇರು ಮೌಲ್ಯ ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.

ಭಾರಿ ಕುಸಿತದ ನಡುವೆಯಲೂ ಭಾರ್ತಿ ಏರ್‌ಟೆಲ್‌ ಕಂಪೆನಿಯ ಷೇರುಗಳು ಮಾತ್ರವೇ ಮುನ್ನಡೆ ಕಂಡಿತು. ಬಿಎಚ್‌ಇಎಲ್‌ ಶೇ.6ರಷ್ಟು ನಷ್ಟಕ್ಕೆ ಗುರಿಯಾದರೆ ಐಸಿಐಸಿಐ ಬ್ಯಾಂಕ್‌, ಎಲ್‌ ಅಂಡ್‌ ಟಿ, ಮಾರುತಿ ಮತ್ತು ಎನ್‌ ಟಿ ಪಿ ಸಿ ಷೇರುಗಳು ತೀವ್ರ ಕುಸಿತ ಕಂಡವು.

ಕಳೆದ ಮಾರ್ಚ್‌ 31ಕ್ಕೆ ಕೊನೆಗೊಂಡ ಲೆಕ್ಕಪತ್ರ ವರ್ಷದಲ್ಲಿ ಗರಿಷ್ಠ ಸಂಖ್ಯೆಯ ಮುಂಚೂಣಿ ಭಾರತೀಯ ಕಂಪೆನಿಗಳು ನಷ್ಟಕ್ಕೆ ಗುರಿಯಾಗಿರುವುದರಿಂದ ಕಳೆದೊಂದು ತಿಂಗಳಿಂದ ಷೇರು ಮೌಲ್ಯಗಳು ನಿರಂತರ ಕುಸಿತವನ್ನು ಕಾಣುತ್ತಿವೆ. ಹಾಗಾಗಿ ಹೂಡಿಕೆದಾರರು ತೀವ್ರ ನಷ್ಟಕ್ಕೆ ಗುರಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್