ವಾಣಿಜ್ಯ

ಚೀನಾ ಬ್ಯಾಂಕ್‌ಗಳಿಂದ ಭಾರತಿ- ಏರ್‌ಟೆಲ್‌ನಲ್ಲಿ ೨.೫ ಬಿಲಿಯನ್ ಡಾಲರ್ ಹೂಡಿಕೆ

Guruprasad Narayana

ನವದೆಹಲಿ: ಎರಡು ಚೀನಾ ಬ್ಯಾಂಕ್ ಗಳಿಂದ ಜಾಗತಿಕ ಮಟ್ಟದಲ್ಲಿ ವಿಸ್ತರಣೆಗೆ ೨.೫ಬಿಲಿಯನ್ ಡಾಲರ್ ಗಳ ಆರ್ಥಿಕ ಬದ್ಧತೆ ನೀಡಿವೆ ಎಂದು ಭಾರತಿ ಏರ್ ಟೆಲ್ ಸಂಸ್ಥೆ ತಿಳಿಸಿದೆ.

ತನ್ನ ಆರ್ಥಿಕ ಅಗತ್ಯಗಳಿಗೆ ತಕ್ಕಂತೆ ಅಂತಿಮ ಒಪ್ಪಂದದ ನಂತರ ಚೀನಾ ಅಭಿವೃದ್ಧಿ ಬ್ಯಾಂಕ್ ಮತ್ತು ಉದ್ದಿಮೆ ಹಾಗು ವಾಣಿಜ್ಯ ಬ್ಯಾಂಕಿನಿಂದ ಭಾರತಿ-ಏರ್ ಟೆಲ್ ಧೀರ್ಘ ಕಾಲದ ಅವಧಿಗೆ ಹಣ ಪಡೆಯಬಹುದಾಗಿದೆ.

"ಇದು ಯಾವುದೆ ದೂರಸಂಪರ್ಕ ಸಂಸ್ಥೆಯ ಜೊತೆ ಚೈನಾ ಬ್ಯಾಂಕ್ ಒಪ್ಪಂದ ಮಾಡಿಕೊಂಡಿರುವ ಅತಿ ದೊಡ್ಡ ಜಂಟಿ ಬದ್ಧತೆ" ಎಂದು ನರೇಂದ್ರ ಮೋದಿ ಅವರ ಚೀನಾ ಪ್ರವಾಸದ ಸಮಯದಲ್ಲೇ ಆಗಿರುವ ಒಪ್ಪಂದದ ಬಗ್ಗೆ ಭಾರತಿ ಏರ್ ಟೆಲ್ ತಿಳಿಸಿದೆ.

ಮಾರ್ಚ್ ೨೦೧೫ ರಲ್ಲಿ ಚೀನಾ ಮೊಬೈಲ್ ಸಂಸ್ಥೆಯೊಂದಿಗೆ ಭಾರತಿ ಏರ್ ಟೆಲ್ ಒಪ್ಪಂದ ಮಾಡಿಕೊಂಡಿತ್ತು. ದೂರಸಂಪರ್ಕ ತಂತ್ರಜ್ಞಾನ ಎಲ್ ಟಿ ಇ ಅಭಿವೃದ್ಧಿಗಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೂ ಅಲ್ಲದೆ ದೂರಸಂಪರ್ಕ ಸಾಧನಗಳ ಪೂರೈಕೆಗೆ ಜಡ್ ಟಿ ಇ ಮತ್ತು ಹುವಾವೆ ಸಂಸ್ಥೆಗಳೊಂದಿಗೂ ಭಾರತಿ ಏರ್ ಟೆಲ್ ಈ ಹಿಂದೆ ಒಪ್ಪಂದ ಮಾಡಿಕೊಂಡಿದೆ.


SCROLL FOR NEXT