ಜೆನ್‌ಎಕ್ಸ್ ನ್ಯಾನೋ ಕಾರು 
ವಾಣಿಜ್ಯ

ಟಾಟಾ ಜೆನ್‌ಎಕ್ಸ್ ನ್ಯಾನೋ ಮಾರುಕಟ್ಟೆಗೆ ಬಿಡುಗಡೆ, ಕಾರಿನ ಬೆಲೆ 2.89 ಲಕ್ಷ

ಟಾಟಾ ಮೋಟಾರ್ಸ್ ಹೊಸ ವಿನ್ಯಾಸದ ಟಾಟಾ ಜೆನ್‌ಎಕ್ಸ್ ನ್ಯಾನೋ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು,...

ಮುಂಬೈ: ಟಾಟಾ ಮೋಟಾರ್ಸ್ ಹೊಸ ವಿನ್ಯಾಸದ ಟಾಟಾ ಜೆನ್‌ಎಕ್ಸ್ ನ್ಯಾನೋ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆ 1.99 ಲಕ್ಷದಿಂದ 2.89 ಲಕ್ಷ(ಎಕ್ಸ್ ಶೋರೂಂ ಬೆಲೆ)ದವರೆಗಿದೆ.

ಮ್ಯಾನುವಲ್‌ನಲ್ಲಿ ಮೂರು ಮಾದರಿಗಳು(ಎಕ್‌ಇ, ಎಕ್ಸ್‌ಎಂ ಮತ್ತು ಎಕ್ಸ್‌ಟಿ) ಹಾಗೂ ಆಟೋಮ್ಯಾಟಿಕ್‌ನಲ್ಲಿ ಎರಡು ಮಾದರಿ(ಎಕ್ಸ್‌ಎಂಎ ಮತ್ತು ಎಕ್ಸ್‌ಟಿಎ)ಗಳನ್ನು ಬಿಡುಗಡೆ ಮಾಡಲಾಗಿದ್ದು, ಆಟೋಮ್ಯಾಟಿಕ್ ಮಾದರಿಯ ಬೆಲೆ 2.69 ಲಕ್ಷ.

ಹೊಸ ನ್ಯಾನೋ ಹಲವಾರು ಬದಲಾವಣೆಗಳಿಗೆ ಒಗ್ಗಿಕೊಂಡಿದೆ. ನ್ಯಾನೋ ಕಾರಿನ ಮುಂಭಾಗದಲ್ಲಿ  ಹೊಸ ಬಂಪರ್, ಹೆಡ್ ಲ್ಯಾಂಪ್, ಗ್ರಿಲ್ಸ್‌ನಂತಿರುವ ಪ್ಲಾಸ್ಟಿಕ್ ಸ್ಟ್ರಾಪ್ ಬದಲಾವಣೆಯ ಕುರುಹು ನೀಡುತ್ತದೆ.  ಅದೇ ವೇಳೆ ಫೋಗ್ ಲ್ಯಾಂಪ್, ಸ್ಮೋಕ್‌ಡ್ ಹೆಡ್ ಲ್ಯಾಂಪ್‌ಗಳಿಂದಾಗಿ ನ್ಯಾನೋಗೆ ಹೊಸ ಲುಕ್ ಬಂದಿದೆ. ಕಾರಿನ ಹಿಂಭಾಗದಲ್ಲಿನ ಬದಲಾವಣೆಯೆಂದರೆ ತೆರೆಯಲ್ಪಡುವ ಡಿಕ್ಕಿ ಮಾತ್ರ. ಡಿಕ್ಕಿಯಲ್ಲಿ ಸಾಧಾರಣ ದೊಡ್ಡದೇ ಎನ್ನುವಷ್ಟು ಜಾಗವೂ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರದಿಂದ ಅಸಹಕಾರ, ಮಲತಾಯಿ ಧೋರಣೆ, ಆದರೂ ವಿತ್ತೀಯ ಶಿಸ್ತು ಪಾಲನೆ: CM ಸಿದ್ದರಾಮಯ್ಯ

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

ಯುದ್ಧ ಕೊನೆಗೊಳಿಸಲು ಕೆಲವು ರಾಷ್ಟ್ರಗಳು 'ಮಧ್ಯಸ್ಥಿಕೆ' ಬಯಸುತ್ತಿವೆ: ಭೀಕರ ದಾಳಿಗಳ ನಡುವೆ ಇರಾನ್ ಅಧ್ಯಕ್ಷರ ಸ್ಫೋಟಕ ಹೇಳಿಕೆ!

ಸುಖೋಯ್ ವಿಮಾನ ದುರಂತ: Op Sindoor ನಲ್ಲಿ ಪಾಕ್ ಗೆ ನಡುಕ ಹುಟ್ಟಿಸಿದ್ದ ಹುತಾತ್ಮ ಪೈಲಟ್ Purvesh Duragkar

ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ: ಕಾಂಗ್ರೆಸ್ ಸಂಸದರಿಗೆ ವಿಪ್ ಜಾರಿ; ಕಡ್ಡಾಯ ಹಾಜರಿಗೆ ಸೂಚನೆ

SCROLL FOR NEXT