ವಾಣಿಜ್ಯ

ಮಂತ್ರಿ ಬಿಲ್ಡರ್ಸ್ ಮೇಲಿನ ದಂಡಕ್ಕೆ ತಡೆ

Srinivasamurthy VN

ನವದೆಹಲಿ: ಅಗಾರ ಕೆರೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಂತ್ರಿ ಬಿಲ್ಡರ್ಸ್ ಸೇರಿ ಬೆಂಗಳೂರಿನ ಎರಡು ಕಟ್ಟಡ ನಿರ್ಮಾಣ ಕಂಪನಿಗಳಿಗೆ ರು.139.85 ಕೋಟಿ ದಂಡ ವಿಧಿಸಿ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಇದಲ್ಲದೆ, ಕಟ್ಟಡ ನಿರ್ಮಾಣ ಕಂಪನಿಗಳ ಅರ್ಜಿಗೆ ಸಂಬಂಧಿಸಿ ಮೆರಿಟ್ ಆಧಾರದ ಮೇರೆಗೆ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಧಿಕರಣಕ್ಕೆ ನ್ಯಾ. ಎ.ಕೆ. ಸಿಕ್ರಿ ಹಾಗೂ ಯು. ಯು. ಲಲಿತ್ ಅವರಿದ್ದ ರಜಾಕಾಲದ ಪೀಠ ಸೂಚಿಸಿದೆ. ಮಂತ್ರಿ ಟೆಕ್ ಝೋನ್ ಪ್ರೈ. ಲಿ. ಮತ್ತು ಕೋರ್‍ಮೈಂಡ್ ಸಾಫ್ಟ್ ವೇರ್ ಆ್ಯಂಡ್ ಸರ್ವೀಸಸ್ ಪ್ರೈ. ಲಿ.ನ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಗೋಪಾಲ ಸುಬ್ರಹ್ಮಣ್ಯಂ ಹಾಗೂ ಕಪಿಲ್ ಸಿಬಲ್, ನ್ಯಾಯಾಧಿಕರಣವು ಕಂಪನಿಗಳ ವಾದವನ್ನು ಮೆರಿಟ್ ಮೇಲೆ ಪರಿಗಣಿಸಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣವು ದಂಡ ವಿಧಿಸಿತ್ತು.

SCROLL FOR NEXT