ಮುಂಬೈ: ಬಿಹಾರ ಚುನಾವಣೆಗಳ ಹಿನ್ನೆಲೆ ಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಇದ್ದುದರಿಂದ ಸತತ ಎರಡನೇ ದಿನ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ನಷ್ಟ ಕಂಡಿವೆ.
ಸೆನ್ಸೆಕ್ಸ್ 248.72 ಅಂಕ ನಷ್ಟದೊಂದಿಗೆ 26,304.20ಕ್ಕೆ ತಲುಪಿದರೆ, ನಿಪಿs್ಟ 84.75 ಅಂಕ ಇಳಿಕೆಯೊಂದಿಗೆ 7,955.45ಕ್ಕೆ ಅಂತ್ಯ ಕಂಡಿತು. ರುಪಾಯಿ ಮೌಲ್ಯ ಸಹ 28 ಪೈಸೆ ಕಡಿಮೆಯಾಗಿದ್ದು ಮಾರುಕಟ್ಟೆಗಳಿಗೆ ಹಿನ್ನಡೆ ತಂದಿತು.
ಬಿಹಾರ ಚುನಾವಣೆ ಮತ್ತು ಎರಡನೇ ತ್ರೈಮಾಸಿಕ ಹಣಕಾಸು ಫಲಿತಾಂಶಗಳು ಅಂದಾಜಿಗಿಂತಲೂ ಕಡಿಮೆಯಾಗುತ್ತಿರುವುದು ಮಾರುಕಟ್ಟೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ವೇದಾಂತ, ಸನ್ಫಾರ್ಮ, ಟಾಟಾ ಸ್ಟೀಲ್ ಷೇರುಗಳು ಹೆಚ್ಚು ನಷ್ಟಕ್ಕೆ ಗುರಿಯಾದವು. ಬಿಎಚ್‍ಇಎಲ್, ಭಾರತಿ ಏರ್‍ಟೆಲ್, ಗೇಲ್, ಸಿಪ್ಲ, ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಸಹ ನಷ್ಟಕ್ಕೆ ಗುರಿಯಾದವು. ಸೆನ್ಸೆಕ್ಸ್ ಗುಂಪಿನಲ್ಲಿ 23 ಷೇರುಗಳು ಕುಸಿತದೊಂದಿಗೆ ಅಂತ್ಯ ಕಂಡವು. ಹಾಗಿದ್ದರೂಕೋಲ್ ಇಂಡಿಯಾ, ಎನ್‍ಟಿಪಿಸಿ, ಹೀರೋಮೊಟಾರ್, ಐಟಿಸಿ, ಎಂಅಂಡ್‍ಎಂ ಏರಿಕೆ ಕಂಡವು.