ಸಂಗ್ರಹ ಚಿತ್ರ 
ವಾಣಿಜ್ಯ

ಅಕಾಲಿಕ ಮಳೆಗೆ ತತ್ತರಿಸಿದ ಕೃಷಿ ವಲಯ: ರು.20 ಸಾವಿರ ಕೋಟಿ ನಷ್ಟ

ಬದಲಾಗುತ್ತಿರುವ ವಾತಾವರಣ ದೇಶದ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಳೆದ...

ನವದೆಹಲಿ: ಬದಲಾಗುತ್ತಿರುವ ವಾತಾವರಣ ದೇಶದ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಳೆದ ಹಿಂಗಾರು ಹಂಗಾಮಿನಲ್ಲಿ ಕಂಡುಬಂದಿದೆ. ಕಳೆದ ನೂರು ವರ್ಷಗಳ ಮಳೆಯ ಏರಿಳಿತ ಗಮನಿಸಿದಾಗ, ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ತೀರಾ ಅಸ್ತವ್ಯಸ್ತವಾಗುತ್ತಿದೆ. ಇದರಿಂದಾಗಿ, ಇಳುವರಿ ಕುಸಿದು ಸಣ್ಣ ಹಾಗೂ ಮಧ್ಯಮ ರೈತರು ತೀವ್ರ ಸಮಸ್ಯೆಗಳನ್ನು ಎದುರಿಸುವಂತಾಗಿದೆ. 
ಈ ವರ್ಷದ ಫೆಬ್ರವರಿ-ಏಪ್ರಿಲ್ ಅವಧಿಯಲ್ಲಿ ಸುರಿದ ಅನಿಯಮಿತ ಮತ್ತು ಆಲಿಕಲ್ಲು ಮಳೆಯಿಂದ ರೈತರು 100 ಲಕ್ಷ ಟನ್ ಹಿಂಗಾರು ಫಸಲು ಕಳೆದುಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ ಕನಿಷ್ಟ ರು.20,000 ಕೋಟಿ ಎಂದಿದೆ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‍ಮೆಂಟ್ ಸಂಸ್ಥೆಯ ವರದಿ. ಇದರಿಂದಾಗಿ ಪ್ರಸಕ್ತ ವರ್ಷ 68.2 ಲಕ್ಷ ಟನ್ ಗೋಧಿ ಹಾಳಾಗಿದ್ದು, ಸರ್ಕಾರ ಈ ಸಲ ಕನಿಷ್ಟ 10 ಲಕ್ಷ ಟನ್ ಗೋದಿ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. 
ಈ ಅವಧಿಯಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ದೇಶಾದ್ಯಂತ 182.38 ಲಕ್ಷ ಹೆಕ್ಟೇರ್ ಅಥವಾ ಶೇ.29.61 ಬಿತ್ತನೆ ಪ್ರದೇಶದಲ್ಲಿ ಬೆಳೆ ಹಾಳಾಗಿದ್ದು, ಈ ಪೈಕಿ ಗೋದಿಯ ಪ್ರಮಾಣ ಶೇ.6ರಿಂದ 7. ಪ್ರಮುಖ ಆಹಾರ ಬೆಳೆಗಳ ಪಾಲು 86.3 ಲಕ್ಷ ಟನ್. ಅಂದರೆ, ಆಹಾರ ಬೆಳೆಗಳ ನಷ್ಟದ ಪ್ರಮಾಣ ರು.15,777 ಕೋಟಿ. ಎಣ್ಣೆಕಾಳು ಬೆಳೆಗಳ ನಷ್ಟ ಪ್ರಮಾಣ 14.1 ಕೋಟಿಯಾಗಿದ್ದು, ರೂಪಾಯಿ ಲೆಕ್ಕದಲ್ಲಿ ರು.4,676 ಕೋಟಿ. ಹೀಗಾಗಿ, ಒಟ್ಟಾರೆ ನಷ್ಟ ರು.20,453 ಕೋಟಿ ಎಂದು ವರದಿ ವಿವರಿಸಿದೆ. 
ಅಂದರೆ, ಹಿಂಗಾರು ಹಂಗಾಮೊಂದರಲ್ಲೇ ಆಲಿಕಲ್ಲು ಹಾಗೂ ಅಕಾಲಿಕ ಮಳೆಯಿಂದಾಗಿ ಶೇ.40 ಗೋದಿ, ಶೇ.14 ಎಣ್ಣೆ ಮತ್ತು ಬೇಳೆಕಾಳು, ಶೇ.4ರಷ್ಟು ಕಿರುಧಾನ್ಯಗಳನ್ನು ಬೆಳೆಯುವ ಪ್ರದೇಶದಲ್ಲಿದ್ದ ಬೆಳೆಗ ಹಾಳಾಗಿವೆ. ಅವೈಜ್ಞಾನಿಕ ಪರಿಹಾರ ಕ್ರಮ ಬೆಳೆ ನಷ್ಟದ ಸಂದರ್ಭದಲ್ಲಿ ನೀಡುತ್ತಿರುವ ಪರಿಹಾರ ವೈಜ್ಞಾನಿಕವಾಗಿಲ್ಲ. ಎಷ್ಟು ಪರಿಹಾರ ನೀಡಬೇಕೆಂಬುದು ತಜ್ಞರ ಬದಲಿಗೆ ರಾಜಕೀಯ ನಿರ್ಣಯವಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಹಾನಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡದೆ ಅಂದಾಜು ಮಾಡಲಾಗುತ್ತದೆ. 
ಬೆಳೆ ವಿಮೆ ಕೂಡಾ ಅವೈಜ್ಞಾನಿಕವಾಗಿದ್ದು, ಅದರ ಮೂಲ ಆಶಯ ಈಡೇರಿಕೆ ಪ್ರಯತ್ನವೇ ನಡೆದಿಲ್ಲ. 2013-14ರಲ್ಲಿ ರು.1.22 ಕೋಟಿ, 2014-15ರಲ್ಲಿ ರು.2.35 ಕೋಟಿ ರೈತರು ವಿಮೆ ಮಾಡಿಸಿದ್ದಾರೆ. ಕೇವಲ ಶೇ.20ರಷ್ಟು ರೈತರು ಮಾತ್ರ ಬೆಳೆವಿಮೆ ವ್ಯಾಪ್ತಿಯಲ್ಲಿದ್ದಾರೆ ಎಂದು ಸಿಎಸ್‍ಇ ವರದಿ ಆತಂಕ ವ್ಯಕ್ತಪಡಿಸಿದೆ.
ಪ್ರಕೃತಿಯಲ್ಲಿನ ಬದಲಾವಣೆಯಿಂದಾಗಿರುವ ಪರಿಣಾಮ
  •  ಮಳೆ ಏರಿಳಿತದಿಂದಾಗಿ ಮುಂಗಾರು ಹಂಗಾಮಿನ ಬೆಳೆ ಹಾಗೂ ತೀವ್ರ ಚಳಿಯಿಂದಾಗಿ ಹಿಂಗಾರು ಬೆಳೆಗಳ ಮೇಲೆ ಪ್ರಭಾವ
  •  ತಾಪಮಾನ ಏರಿಕೆಯಿಂದ, ಹಿಂಗಾರು ಹಂಗಾಮಿನಲ್ಲಿ ಗೋದಿ ಬೆಳೆ ಮೇಲೆ ಪರಿಣಾಮ
  •  ಬತ್ತ, ಗೋದಿ ಹಾಗೂ ತೋಟಗಾರಿಕೆ ಬೆಳೆಗಳ ಮೇಲೆ ಋಣಾತ್ಮಕ ಪ್ರಭಾವ
  •  ಸೊಯಾಬೀನ್, ಕಡಲೆ, ಆಲೂಗಡ್ಡೆಯಂಥ ಕೆಲ ಬೆಳೆಗಳಿಗೆ ಅನುಕೂಲ
  •  ಬಿಸಿ ಹವೆಯಿಂದಾಗಿ ಹೈನು ಉತ್ಪಾದನೆಯಲ್ಲಿ ಕುಸಿತ 
  •  ಬಿಸಿಯಿಂದಾಗಿ ಕುಕ್ಕು ಟೋದ್ಯಮಕ್ಕೆ ತೀವ್ರ ಸಂಕಷ್ಟ ಏನು ಪರಿಹಾರ?
  •  ಒಟ್ಟು ಶೇ.50ರಷ್ಟು ನಷ್ಟಭರ್ತಿ
  •  ಶೇ.28 - ರಾಜಸ್ತಾನ
  •  ಶೇ.67 - ಮಧ್ಯಪ್ರದೇಶ 
  •  ರು.18,000 ಕೋಟಿ/ ಹೆಕ್ಟೇರ್ - ಉತ್ತರಪ್ರದೇಶ
  •  ರು.13,500 ಕೋಟಿ/ ಹೆಕ್ಟೇರ್ - ರಾಜಸ್ತಾನ
  •  ರು.50,000 ಕೋಟಿ/ ಹೆಕ್ಟೇರ್ - ದೆಹಲಿ
  •  ಬ್ರಿಟಿಷ್ ಕಾಲದ ನಷ್ಟ ಅಳೆಯುವಿಕೆ ನೀತಿಯಿಂದಾಗಿ ನಷ್ಟದ ಮತ್ತು ಪರಿಹಾರದ ಖಚಿತ ಲೆಕ್ಕ ಸಿಗುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!