ಮುಂಬೈ: ಟಾಟಾ ಗ್ರೂಪ್ ಭಾರತದ ನಂ.1 ಕ್ರಿಯೇಟಿವ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ಬ್ರಾಂಡ್‍ಗಳ ಕುರಿತ ವಿಶ್ಲೇಷಣಾ ಸಂಸ್ಥೆ ಟಿಆರ್‍ಎ ರೀಸರ್ಚ್ ದೇಶದ 16 ನಗರಗಳಲ್ಲಿ ಸಮೀಕ್ಷೆ ನಡೆಸಿದ್ದು, ಟಾಟಾ ಮೊದಲ ಸ್ಥಾನ ಪಡೆದಿದೆ.
ನಾವೀನ್ಯತೆ, ಮನರಂಜನೆ ಮತ್ತು ಉಪಯೋಗ ನೋಡಿ ಈ ಆಯ್ಕೆ ಮಾಡಿಲ್ಲ. ಮುಂದೆ ಬರುವ ಸಮಸ್ಯೆಗಳ ನಿವಾರಣೆ ಮತ್ತು ರಕ್ಷಣೆಯನ್ನೂ ಪರಿಗಣಿಸಲಾಗಿದೆ. ಇದರಲ್ಲಿ ಟಾಟಾ ಗ್ರೂಪ್ ಮುಂಚೂಣಿಯಲ್ಲಿದೆ ಎಂದು ಸಮೀಕ್ಷೆ ಹೇಳಿದೆ.