ವಾಣಿಜ್ಯ

ಸತತ 6 ದಿನಗಳ ಏರಿಕೆ ಬಳಿಕ ಮುಗ್ಗರಿಸಿದ ಸೆನ್ಸೆಕ್ಸ್, 190 ಅಂಕಗಳ ಕಡಿತ

Srinivasamurthy VN

ಮುಂಬೈ: ಸಕಾರಾತ್ಮಕ ವಹಿವಾಟಿನಿಂದಾಗಿ ಸತತ ಆರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಭಾರತೀಯ ಷೇರುಮಾರುಕಟ್ಟೆ ಗುರುವಾರ ಮುಗ್ಗರಿಸಿದೆ.

ಗುರುವಾರ ದಿನದಂತ್ಯದ ವಹಿವಾಟಿನ ವೇಳೆಗೆ ಸೆನ್ಸೆಕ್ಸ್ 190 ಅಂಕಗಳನ್ನು ಕಳೆದುಕೊಂಡಿದ್ದು, 26,845.81 ಅಂಕಗಳಿಗೆ ಸ್ಥಿರವಾಗಿದೆ. ಇನ್ನು ನಿಫ್ಟಿ ಸೂಚ್ಯಂಕ ಕೂಡ 48.05 ಅಂಕಗಳ ಇಳಿಕೆಯೊಂದಿಗೆ 8,129.35 ಅಂಕಗಳಿಗೆ ಸ್ಥಿರವಾಗಿದೆ. ಪ್ರಮುಖವಾಗಿ ಐಟಿಸಿ ಶೇ.3, ಐಡಿಯಾ ಸೆಲ್ಯುಲರ್‌ ಶೇ.2, ರಿಲಯನ್ಸ್‌ ಇಂಡಸ್ಟ್ರೀಸ್‌ ಶೇ.2 ಮತ್ತು ಎಕ್ಸಿಸ್‌ ಬ್ಯಾಂಕ್‌ ಶೇ.2.ರಷ್ಟು ನಷ್ಟ ಅನುಭವಿಸಿದ್ದು, ಟಿಸಿಎಸ್‌ ಶೇ.1.2, ಎಚ್‌ಡಿಎಫ್ಸಿ ಶೇ.1, ಲೂಪಿನ್‌ ಶೇ.1, ಸನ್‌ಫಾರ್ಮಾ ಶೇ.1 ಮತ್ತು ಮಹಿಂದ್ರ ಸಂಸ್ಥೆಯ ಷೇರುಗಳಲ್ಲಿ ಶೇ.1ರಷ್ಟು ನಷ್ಟ ಕಂಡುಬಂದಿದೆ.

ಸತತ ಆರು ದಿನಗಳ ವಹಿವಾಟಿನಲ್ಲಿ ಲಾಭದ ಹಾದಿಯಲ್ಲಿ ನಡೆದು ಬಂದ ಷೇರುಗಳನ್ನು ಹೂಡಿಕೆದಾರರು ಏಕಾಏಕಿ ಮಾರಲು ಮುಂದಾಗಿ ಲಾಭ ಮಾಡಿಕೊಳ್ಳಲು ತೊಡಗಿಕೊಂಡಿದ್ದೇ ಭಾರತೀಯ ಷೇರುಮಾರುಕಟ್ಟೆ ಮುಗ್ಗರಿಸಲು ಕಾರಣವಾಯಿತೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT