ವಾಣಿಜ್ಯ

ಏಷ್ಯಾ ಟಾಪ್‍ನಲ್ಲಿ ಅಂಬಾನಿ ಕುಟುಂಬ

Mainashree

ವಾಷಿಂಗ್ಟನ್: ಏಷ್ಯಾದ ಟಾಪ್ 50 ಉದ್ಯಮ ಕುಟುಂಬ-ಗಳಲ್ಲಿ ಭಾರತದ 14 ಕುಟುಂಬ ಸೇರಿವೆ. ಫ್ರೋಬ್ರ್ಸ್ ಪತ್ರಿಕೆ ಈ ಏಷ್ಯಾ ಫಾರ್ಚೂನ್ ಪಟ್ಟಿ ಬಿಡುಗಡೆ ಮಾಡಿದ್ದು ಅಂಬಾನಿ ಕುಟುಂಬ ಮೂರನೆ ಸ್ಥಾನದಲ್ಲಿದ್ದರೆ, ಪ್ರೇಮ್ಜಿ ಕುಟುಂಬ 7 ಮತ್ತು ಹಿಂದೂಜಾ ಕುಟುಂಬ 9ನೇ ಸ್ಥಾನದಲ್ಲಿವೆ. 

ಅಂಬಾನಿ ಸಹೋದರರಾದ ಮುಖೇಶ್ ಮತ್ತು ಅನಿಲ್ ಇಬ್ಬರ ಸಂಪತ್ತನ್ನೂ ಒಗ್ಗೂಡಿ ಸಿದ್ದು 2,150 ಕೋಟಿ ಡಾಲರ್ ಸಂಪತ್ತು ಹೊಂದಿದ್ದಾರೆ. 1,700 ಕೋಟಿ ಡಾಲರ್ ಗಳೊಂದಿಗೆ ಪ್ರೇಮ್ಜಿ ಕುಟುಂಬ ಏಳನೇ ಸ್ಥಾನದಲ್ಲಿದ್ದರೆ, 1,490 ಕೋಟಿ ಡಾಲರ್‍ಗಳೊಂದಿಗೆ ಮಿಸ್ತ್ರಿ ಹತ್ತನೇ ಸ್ಥಾನ ಆಕ್ರಮಿಸಿದ್ದಾರೆ. 
ಈ ಪಟ್ಟಿಯಲ್ಲಿರುವ ಅರ್ಧಕ್ಕಿಂತಲೂ ಹೆಚ್ಚು ಕುಟುಂಬಗಳು ಚೀನಾಕ್ಕೆ ಸೇರಿವೆ. ಆದರೆ ಒಂದು ಕುಟುಂಬವೂ ಚೀನಾದಲ್ಲಿ ನೆಲೆಸಿಲ್ಲ. ಕುಟುಂಬಗಳ ಯುವಕರು ಅಥವಾ ಎರಡನೇ ಪೀಳಿಗೆಯವರು ಉದ್ಯಮ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿ ಸಂಸ್ಥಾಪಕರಾದ ಲೀ ಕುಟುಂಬ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಹಾಂಕಾಂಗ್‍ನ ಹಿಂಡರ್‍ಸನ್ ಲ್ಯಾಂಡ್ ಡೆವಲಪ್‍ಮೆಂಟ್ ಕಂಪನಿ ಮಾಲೀಕತ್ವದ ಕುಟುಂಬ ಎರಡನೇ ಸ್ಥಾನದಲ್ಲಿದೆ. 
ಮುಖೇಶ್ ಅಂಬಾನಿ ಪುತ್ರ ಆಕಾಶ್ ಮತ್ತು ಪುತ್ರಿ ಇಶಾ ರಿಲಯನ್ಸ್ ಜಿಯೊ ಇನ್ಫೋಕಾಂ ಮತ್ತು ರಿಲಯನ್ಸ್ ರಿಟೇಲ್‍ನ ನಿರ್ದೇಶಕ ಮಂಡಳಿಗಳಲ್ಲಿದ್ದಾರೆ. ಅನಿಲ್ ಅಂಬಾನಿ ಪುತ್ರ ಜೈ ಅನ್‍ಮೋಲ್ ರಿಲಯನ್ಸ್ ಕ್ಯಾಪಿಟಲ್ ಬೋರ್ಡ್ನಲ್ಲಿದ್ದಾರೆ. ಡಾಬರ್ ಇಂಡಿಯಾದ ಬರ್ಮನ್ ಕುಟುಂಬ 550 ಕೋಟಿ ಡಾಲರ್‍ಗಳೊಂದಿಗೆ 30ನೇ ಸ್ಥಾನದಲ್ಲಿದೆ. 
ಕಂಪನಿಯ ಮುಖ್ಯಸ್ಥ ಆನಂದ್ ಬರ್ಮನ್‍ಗೆ 63 ವರ್ಷ ವಯಸ್ಸಾಗಿದ್ದು ಕಂಪನಿ ನಡೆಸಲು 1998ರಲ್ಲಿ ವೃತ್ತಿಪರರನ್ನು ನೇಮಕ ಮಾಡಿದರು. ಈ ಅವಧಿಯಲ್ಲಿ ಕಂಪನಿ ಲಾಭ 24 ಪಟ್ಟು ಮತ್ತು ಮಾರುಕಟ್ಟೆ ಬಂಡವಾಳ 40 ಪಟ್ಟು ಏರಿಕೆ ದಾಖಲಿಸಿತು. ಡಾಬರ್ ಕಂಪನಿ ವೈಯಕ್ತಿಕ ಆರೋಗ್ಯ, ಆಯುರ್ವೇದಿಕ್ ಶಾಂಪೂ ಸೇರಿ 400 ಉತ್ಪನ್ನ ತಯಾರಿಸಲಿದೆ.
SCROLL FOR NEXT