ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇ 3 .6 ರಷ್ಟಾಗಿಸಲು ಗುರಿ ಹೊಂದಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಐದು ದಿನಗಳ ಇಂಡಿಯಾ- ಆಫ್ರಿಕಾ ಫೋರಂ ಶೃಂಗಸಭೆಯಲ್ಲಿ ಮಾತನಾಡಿರುವ ಜೇಟ್ಲಿ, ಶೇ.3.9 ಸಾಧಾರಣ ಗುರಿಯಾಗಿದ್ದು, ಪ್ರಸ್ತುತ ಇರುವ ತೆರಿಗೆ ಆದಾಯ ಹಾಗೂ ವೆಚ್ಚಗಳನ್ನು ಗಮನಿಸಿದರೆ ಈ ಗುರಿಯನ್ನು ತಲುಪುವುದು ಸವಾಲಿನ ವಿಷಯ ಅಲ್ಲ. ವರ್ಷದ ಪ್ರಥಮ ಆರು ತಿಂಗಳಲ್ಲಿ ತೆರಿಗೆ ಸಂಗ್ರಹ ಉತ್ತಮವಾಗಿದ್ದು, ಉಳಿದ ಎರಡು ತ್ರೈಮಾಸಿಕದಲ್ಲೂ ಇದೇ ಮುಂದುವರೆಯಲಿದೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತೆರಿಗೆ ಉತ್ತಮವಾಗಿ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸಚಿವಾಲಯಗಳ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ಸಾಧ್ಯತೆಗಳಿಲ್ಲ ಎಂದು ನಿರೀಕ್ಷಿಸಲಾಗಿದೆ. ಮುಂದಿನ 3 ವರ್ಷಗಳಿಗೆ ವಿತ್ತೀಯ ಕೊರತೆ ಗುರಿ ನಿಗದಿಪಡಿಸಲಾಗಿದ್ದು, 2017 -18 ರ ವೇಳೆಗೆ ಶೇ.3 ರಷ್ಟಾಗಿಸುವ ಗುರಿ ಹೊಂದಲಾಗಿದೆ ಎಂದು ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ.