ವಾಣಿಜ್ಯ

ಕರಡು ವಿಮಾನಯಾನ ನೀತಿ ಪ್ರಕಟ: ಕೈಗೆಟುಕುವ ದರದಲ್ಲಿ ಟಿಕೆಟ್ ಪ್ರಮುಖ ಅಂಶ

Srinivas Rao BV

ನವದೆಹಲಿ: ನಾಗರಿಕ ವಿಮಾನಯಾನದ ಹೊಸ ಕರಡು ನೀತಿ ಬಿಡುಗಡೆಯಾಗಿದ್ದು ಕೈಗೆಟುಕುವ ದರದಲ್ಲಿ ಸಣ್ಣ ಪಟ್ಟಣಗಳಿಗೆ ವಿಮಾನ ಯಾನ ಸೌಲಭ್ಯ ಒದಗಿಸುವುದಕ್ಕೆ ಉತ್ತೇಜನ ನೀಡುವುದು ಹಾಗೂ ದೇಶೀಯ ವಿಮಾನಯಾನ ಸಂಸ್ಥೆಗಳು ವಿದೇಶಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ನಿಯಮಗಳನ್ನು ಸಡಿಲಗೊಳಿಸುವುದು ಪ್ರಮುಖ ಅಂಶಗಳಾಗಿವೆ.
ವಿಮಾನಯಾನವನ್ನು ಕೈಗೆಟುಕುವ ದರದಲ್ಲಿರುವಂತೆ ಮಾಡಲು ಕ್ರಮ ಕೈಗೊಂಡಿರುವ ಸರ್ಕಾರ ಒಂದು ಗಂಟೆ ಅವಧಿಯ ವಿಮಾನ ಪ್ರಯಾಣದ ಟಿಕೆಟ್ ಮೊತ್ತ 2 ,500 ಕ್ಕಿಂತ ಹೆಚ್ಚಿಗೆ ದರ ವಿಧಿಸಬಾರದೆಂಬ ನಿಯಮ ಜಾರಿಗೆ ತರಲು ಉದ್ದೇಶಿಸಿದೆ.
ಹೊಸ ಕರಡು ನೀತಿಯ ಬಗ್ಗೆ ಪಾಲುದಾರರಿಗೆ ಮತ್ತು ಸಾರ್ವಜನಿಕರೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸಲಾಗಿದೆ. ಸಮಾಲೋಚನೆ ವೇಳೆ ಪ್ರಸ್ತಾಪವಾದ ವಿಷಯಗಳನ್ನು ಪರಿಗಣಿಸುತ್ತೇವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ಬಾಬು ಹೇಳಿದ್ದಾರೆ. ಕರಡು ನೀತಿ ನಿಗದಿತ ಅವಧಿಗೆ ಮಾತ್ರ ಅಸ್ಥಿತ್ವದಲ್ಲಿರುವುದರಿಂದ  ನಾಗರಿಕ ವಿಮಾನಯಾನ ಉದ್ಯಮ ಮುಂಚಿತವಾಗಿ ಯೋಜನೆಗಳನ್ನು ಸಿದ್ಧಪಡಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಣ್ಣ ಪ್ರದೇಶಗಳಿಗೆ ವಿಮಾನ ಸೌಲಭ್ಯ ಒದಗಿಸುವ ಸಂಸ್ಥೆಗಳು ಸರ್ಕಾರದಿಂದ ಇಂಧನ ಬೆಲೆಗೆ ಸಂಬಂಧಿಸಿದಂತೆ ಹೆಚ್ಚು ಪ್ರಯೋಜನ ಪಡೆಯಲಿವೆ ಎಂದು ಅಶೋಕ್ ಗಜಪತಿ ಬಾಬು ಹೇಳಿದ್ದಾರೆ. ಏರ್​ಲೈನ್ಸ್, ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಗಳಿಗೆ ಹಲವಾರು ತೆರಿಗೆ ಪ್ರೋತ್ಸಾಹ ಕ್ರಮಗಳನ್ನು ಕರಡು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. 

SCROLL FOR NEXT