ವಾಣಿಜ್ಯ

ಆದಾಯ ತೆರಿಗೆ ಬಾಕಿದಾರರ ಬಗ್ಗೆ ಮಾಹಿತಿ ನೀಡಿದರೆ 15 ಲಕ್ಷ ರು. ಬಹುಮಾನ

Srinivas Rao BV

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡಬೇಕಿರುವ ಬಾಕಿದಾರರ ಬಗ್ಗೆ ಸೂಕ್ತ ಮಾಹಿತಿ ನೀಡಿದವರಿಗೆ 15 ರು. ಲಕ್ಷ ಬಹುಮಾನ ನೀಡುವುದಾಗಿ ಆದಾಯ ತೆರಿಗೆ ಇಲಾಖೆ ಘೋಷಿಸಿದೆ.

ಹೊಸ ಮಾರ್ಗಸೂಚಿಗಳನ್ನು ರಚಿಸಿರುವ ಐಟಿ ಇಲಾಖೆ, ತೆರಿಗೆ ಪಾವತಿ ಮಾಡದೇ ಇರುವವರ ಬಗ್ಗೆ ಕ್ರಮ ಕೈಗೊಳ್ಳಬಹುದಾದ ರೀತಿಯಲ್ಲಿ ಮಾಹಿತಿ ನೀಡುವವರಿಗೆ, ಬಾಕಿ ಪಾವತಿಯಾಗಬೇಕಿದ್ದ ತೆರಿಗೆಯ ಶೇ.10 ರಷ್ಟು ಹಣ(ಸುಮಾರು 15 ಲಕ್ಷ ರೂಪಾಯಿ) ಬಹುಮಾನ ನೀಡುವುದಾಗಿ ತಿಳಿಸಿದೆ. ಈ ಬಗ್ಗೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಮಾಹಿತಿ ರವಾನಿಸಲಾಗಿದೆ.
ತೆರಿಗೆ ಹಣ ವಸೂಲಿ ಮಾಡುವುದು ಅತಿ ದೊಡ್ಡ ಸವಾಲಿನ ಕೆಲಸವಾಗಿದ್ದು, ಸರ್ಕಾರಕ್ಕೆ ಬರವೇಕಿರುವ ತೆರಿಗೆ ಹಣವನ್ನು ಸುಲಭವಾಗಿ ಸಂಗ್ರಹಿಸಲು ಆದಾಯ ಇಲಾಖೆ ಈ ಮಾರ್ಗ ಕಂಡುಕೊಂಡಿದೆ. ತೆರಿಗೆ ವಂಚಕರ ಬಗ್ಗೆ  ಮಾಹಿತಿ ನಿಡುವವರ ಗುರುತನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ವರಮಾನ ತೆರಿಗೆ ವಿವರ ಸಲ್ಲಿಸಲು ವಿಧಿಸಿದ್ದ ಗಡುವನ್ನು ಕೇಂದ್ರ ಸರ್ಕಾರ ಸೆ.7 ವರೆಗೆ ವಿಸ್ತರಿಸಿತ್ತು. ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ 7 .98 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ.

SCROLL FOR NEXT