ವಾಣಿಜ್ಯ

ರುಪಾಯಿ ಮೌಲ್ಯ ಚೇತರಿಕೆ

Vishwanath S
ಮುಂಬೈ: ಕಳೆದ ಮೂರು ದಿನಗಳಿಂದ ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಾ ಸಾಗಿದ್ದ ರುಪಾಯಿ, ಮಂಗಳವಾರ ಚೇತರಿಕೆ ಕಂಡಿದೆ. 27 ಪೈಸೆಯಷ್ಟು ಮೌಲ್ಯವೃದ್ಧಿಸಿಕೊಂಡಿರುವ ರುಪಾಯಿ ಡಾಲರ್ ಎದುರು 66.55ರಷ್ಟಾಗಿದೆ. 
ಬ್ಯಾಂಕ್‍ಗಳು ಮತ್ತು ಎಕ್ಸ್ ಪೋರ್ಟ್‍ರ್‍ಗಳು ಹೊಸ ಅಮೆರಿಕ ಡಾಲರ್‍ಗಳನ್ನು ಮಾರಾಟ ಮಾಡಿದ್ದರಿಂದ ಮತ್ತು ವಿದೇಶಗಳಲ್ಲಿ ಡಾಲರ್ ಅಪಮೌಲ್ಯಗೊಂಡಿದ್ದರ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ವೃದ್ಧಿಯಾಗಿದೆ. ಮಂಗಳವಾರ ಆರಂಭದಲ್ಲಿ 8ಪೈಸೆಯಷ್ಟು ವೃದ್ಧಿಯಾಗಿದ್ದ ರುಪಾಯಿ ದರ, ಕೊನೆಗೆ 27 ಪೈಸೆಯಷ್ಟು ಚೇತರಿಸಿಕೊಂಡಿದೆ.
SCROLL FOR NEXT