ನವದೆಹಲಿ: ಆಗಸ್ಟ್ ತಿಂಗಳಲ್ಲಿ ದೇಶದ ರಫ್ತುಶೇ.20.66ರಷ್ಟು ಕುಸಿದಿದ್ದು 2,126 ಕೋಟಿ ಡಾಲರ್‍ಗೆ ತಲುಪಿದೆ. ಕಳೆದ ವರ್ಷದ ಆಗಸ್ಟ್‍ನಲ್ಲಿ ರಫ್ತು2,680 ಕೋಟಿ ಡಾಲರ್‍ನಷ್ಟಿತ್ತು.
ಇದರೊಂದಿಗೆ ದೇಶದ ರಫ್ತುಸತತ ಒಂಬತ್ತನೇ ತಿಂಗಳು ಕುಸಿದಂತಾಗಿದೆ. ಈ ಹಿಂದೆ 2014ರ ನವೆಂಬರ್‍ನಲ್ಲಿ ಮಾತ್ರ ರಫ್ತುಏರಿಕೆ ದಾಖಲಿಸಿತ್ತು. ಜಾಗತಿಕ ಆರ್ಥಿಕತೆ ಹಿಂಜರಿತ ದಲ್ಲಿರುವುದು ಮತ್ತು ಸರಕು ದರಗಳು ಇಳಿಮುಖ ಕಂಡಿರುವು ದರಿಂದ ರಫ್ತುಕುಸಿಯಲು ಪ್ರಮುಖ ಕಾರಣವಾಗಿದೆ.
ಕೇಂದ್ರ ವಾಣಿಜ್ಯ ಮಂಗಳವಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು ಆಗಸ್ಟ್‍ನಲ್ಲಿ ಆಮದು ಸಹ ಶೇ.9.95ರಷ್ಟು ಇಳಿಮುಖ ಕಂಡಿದ್ದು 3,374 ಕೋಟಿ ಡಾಲರ್ ಗೆ ತಲುಪಿದೆ. ಇದರೊಂದಿಗೆ ದೇಶದ ವಾಣಿಜ್ಯ ಕೊರತೆ 1,247 ಕೋಟಿ ಡಾಲರ್ ಗಳಷ್ಟಿದೆ. ಜುಲೈಗೆ ಹೋಲಿಸಿದರೆ ವಾಣಿಜ್ಯ ಕೊರತೆ ತುಸು ಕಡಿಮೆಯಾಗಿದೆ.
ಹೆಚ್ಚಿದ ಚಿನ್ನದ ಆಮದು: ಮತ್ತೊಂದು ಕಡೆ ಚಿನ್ನದ ಆಮದು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ 495 ಕೋಟಿ ಡಾಲರ್ ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ 206 ಕೋಟಿ ಡಾಲರ್ ಗಳಷ್ಟಿತ್ತು.
ಚಿನ್ನ ಆಮದು ದರ ಇಳಿಕೆ: ಕೇಂದ್ರ ಸರ್ಕಾರ ಚಿನ್ನ ಮತ್ತು ಬೆಳ್ಳಿ ಆಮದು ದರಗಳನ್ನು ಕಡಿತಗೊಳಿಸಿದೆ. ಹತ್ತು ಗ್ರಾಂ ಚಿನ್ನದ ದರ 369 ಡಾಲರ್‍ನಿಂದ 359 ಡಾಲರ್ ಗೆ ಇಳಿಸಿದೆ.