ಭರ್ತಿ ಮಾಡಿದ ಐಟಿ ರಿಟರ್ನ್ಸ್
ಮೊದಲೇ ಭರ್ತಿಯಾಗಿರುವ ಆದಾಯ ತೆರಿಗೆ ರಿಟರ್ನ್ಸ್ ಸಿಕ್ಕಿದರೆ ಸಲ್ಲಿಸಲು ಎಷ್ಟು ಸುಲಭ ಅಲ್ಲವೇ. ಎಲ್ಲವೂ ಅಂದುಕೊಂಡಂತೆ...
ನವದೆಹಲಿ: ಮೊದಲೇ ಭರ್ತಿಯಾಗಿರುವ ಆದಾಯ ತೆರಿಗೆ ರಿಟರ್ನ್ಸ್ ಸಿಕ್ಕಿದರೆ ಸಲ್ಲಿಸಲು ಎಷ್ಟು ಸುಲಭ ಅಲ್ಲವೇ. ಎಲ್ಲವೂ ಅಂದುಕೊಂಡಂತೆ ಆದರೆ ಐಟಿ ರಿಟರ್ನ್ಸ್ ಸಲ್ಲಿಸುವವರಿಗೆ
ಮುಂದಿನ ಹಣಕಾಸು ವರ್ಷದಿಂದ ಅಂತಹ ಸೌಲಭ್ಯ ಸಿಗಲಿದೆ. ಆದಾಯ ತೆರಿಗೆ ರಿಟರ್ನ್ಸ್ ಇ-ಫೈಲಿಂಗ್ ಜನಪ್ರಿಯಗೊಳಿಸಲು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ಚಿಂತನೆ ನಡೆಸಿದೆ. ಅಂದರೆ ತೆರಿಗೆದಾರರು ಆಧಾರ್ ಸಂಖ್ಯೆ ನೀಡಿರುತ್ತಾರೆ ಎಂದುಕೊಳ್ಳಿ. ಇ-ಫೈಲಿಂಗ್ ಮೂಲಕ ಸಲ್ಲಿಸುವ ರಿಟರ್ನ್ಸ್ನಲ್ಲಿ ಐಟಿ ಇಲಾಖೆಯೇ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿರುತ್ತದೆ.
ಆಗ ನಿಮ್ಮ ಹೆಸರಿನಿಂದ ಆರಂಭಿಸಿ ಎಲ್ಲ ಮಾಹಿತಿ ರಿಟರ್ನ್ಸ್ ನಲ್ಲಿ ಭರ್ತಿಯಾಗಿರುತ್ತದೆ.ಹೀಗೆಮೊದಲೇ ಭರ್ತಿಯಾಗಿರುವ ರಿಟ ರ್ನ್ಸ್ ಓಪನ್ ಮಾಡಿ ಆದಾಯ, ಉಳಿತಾಯಕ್ಕೆ ಸಂಬಂಧಿಸಿದ ಮಾಹಿತಿ ಅಪ್ಲೋಡ್ ಮಾಡಿ ಸಲ್ಲಿಸಿದರಾಯಿತು. ಗ್ರಾಹಕ ಸ್ನೇಹಿಯಾದ ಈ ಯೋಜನೆಯನ್ನು ಮುಂದಿನ ಹಣಕಾಸು ವರ್ಷದಿಂದ ಅನುಷ್ಠಾನಕ್ಕೆ ತರಲು ಆದಾಯ ತೆರಿಗೆ ಇಲಾಖೆಯ ನೀತಿ ನಿರೂಪದ ಸಮಿತಿ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆ ಮೂಲಗಳು ಹೇಳಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.