ವಾಣಿಜ್ಯ

2025ರ ವೇಳೆಗೆ ಭಾರತ-ಅಮೆರಿಕ ನಡುವಿನ ವಹಿವಾಟು 500 ಬಿಲಿಯನ್ ಡಾಲರ್

Mainashree

ಮುಂಬೈ: ಭಾರತ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕ ದೇಶವಾಗಿ ಹೊರಹೊಮ್ಮುತ್ತಿರುವುದರಿಂದ ಮತ್ತು ಅಮೆರಿಕದ ಪ್ರಮುಖ ಪಾಲುದಾರ ದೇಶವಾಗಿರುವುದರಿಂದ 2025ರ ವೇಳೆಗೆ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವಹಿವಾಟು 500 ಬಿಲಿಯನ್ ಡಾಲರ್ ತಲುಪಲಿದೆ ಎಂದು ಜಾಗತಿಕ ಹಣಕಾಸು ವಿಶ್ಲೇಷಣಾ ಸಂಸ್ಥೆ ಪಿಡಬ್ಲ್ಯುಸಿ ಮತ್ತು ಇಂಡೋಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ನಡೆಸಿರುವ ಸಮೀಕ್ಷೆ ಹೇಳಿದೆ.

ಕೇಂದ್ರ ಮತ್ತು ರಾಜ್ಯಸರ್ಕಾರಗಳು, ಹೂಡಿಕೆದಾರರು, ಉದ್ಯಮಿಗಳು, ವಾಣಿಜ್ಯ ಮತ್ತು ಕಾರ್ಪೋರೇಟ್ ಗಳು ಉತ್ತಮ ಪ್ರಯತ್ನದಿಂದ ಈ ಗುರಿ ತಲುಪಲು ಸಾಧ್ಯ ಎಂದು ಈ ಸಂಸ್ಥೆಗಳು ತಮ್ಮ ಸಮೀಕ್ಷೆಯಲ್ಲಿ ಹೇಳಿವೆ.

SCROLL FOR NEXT