ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ವಾರದ ವಹಿವಾಟು ಆರಂಭದ ದಿನ ಸೆನ್ಸೆಕ್ಸ್ ಕುಸಿತ

ಮುಂಬೈ ಷೇರು ಮಾರುಕಟ್ಟೆಯ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ...

ಸಾಂದರ್ಭಿಕ ಚಿತ್ರ
Sumana Upadhyaya
Updated On : 11 Apr 2016, 11:43 am

ಮುಂಬೈ: ಮುಂಬೈ ಷೇರು ಮಾರುಕಟ್ಟೆಯ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 100 ಅಂಕಗಳಷ್ಟು ಏರಿಕೆ ಕಂಡುಬಂದರೂ ಸಹ ಐಟಿ ವಲಯದ ಷೇರುಗಳಲ್ಲಿ ಕುಸಿತ ಕಂಡುಬಂದು ಸದ್ಯದ ವರದಿ ಬಂದಾಗ 23 ಅಂಕಗಳ ಇಳಿಕೆಯೊಂದಿಗೆ 24 ಸಾವಿರದ 652ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 4 ಅಂಕಗಳ ಇಳಿಕೆಯೊಂದಿಗೆ 7 ಸಾವಿರದ 551ರಲ್ಲಿ ವಹಿವಾಟು ನಡೆಸುತ್ತಿದೆ.

ಪ್ರಮುಖ ಐಟಿ ಕಂಪೆನಿಗಳಾದ ಟಿಸಿಎಸ್, ಟೆಕ್ ಮಹೀಂದ್ರ, ವಿಪ್ರೋ, ಹೆಚ್ ಸಿಎಲ್ ಟೆಕ್ನೋಲಜೀಸ್, ಮೈಂಡ್ ಟ್ರೀ, ಒಎಫ್ಎಸ್ಎಸ್ ಮತ್ತು ಪರ್ಸಿಸ್ಟೆಂಟ್ ಸಿಸ್ಟಮ್ಸ್ ಗಳಲ್ಲಿ ಇಳಿಕೆ ಕಂಡುಬಂದದ್ದೇ ಇಂದಿನ ವಹಿವಾಟಿನ ಇಳಿಕೆಗೆ ಪ್ರಮುಖ ಕಾರಣವಾಗಿದೆ.
ಏಷ್ಯಾ ಷೇರು ಮಾರುಕಟ್ಟೆಯ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಇಳಿಕೆ ಕಂಡುಬಂದಿದೆ.

ಈ ವಾರದಲ್ಲಿ  ಏಪ್ರಿಲ್ 14ರ ಗುರುವಾರ ಬಾಬಾ ಸಾಹೇಬ್‌ ಅಂಬೇಡ್ಕರ್‌ ಜಯಂತಿ ಹಾಗೂ ಎ.15ರಂದು ರಾಮ ನವಮಿ ಪ್ರಯುಕ್ತ ಷೇರು ಮಾರುಕಟ್ಟೆಗೆ ರಜೆ ಇರುವುದರಿಂದ ಹೂಡಿಕೆದಾರರು ಈ ವಾರದ ಮೊದಲ ಮೂರು ದಿನಗಳಿಗೆ ವ್ಯವಹಾರ ಸೀಮಿತವಾಗಿರುವುದನ್ನು ದೃಷ್ಟಿಯಲ್ಲಿರಿಸಿಕೊಂಡು ಎಚ್ಚರಿಕೆಯ ನಡೆ ಇರಿಸುತ್ತಿರುವುದು ಕಂಡುಬಂದಿದೆ.

ಜಪಾನ್ ನ ನಿಕ್ಕಿ ಶೇಕಡಾ 1.56ರಷ್ಟು ಕುಸಿತ ಕಂಡುಬಂದರೆ, ಹಾಂಗ್ ಕಾಂಗ್ ನ ಹಾಂಗ್ ಸೆಂಗ್ ಶೇಕಡಾ 0.13ರಷ್ಟು, ತೈವಾನ್ ನ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಶೇಕಡಾ 0.15ರಷ್ಟು ಕುಸಿತ ಕಂಡುಬಂದಿದೆ. ಇನ್ನೊಂದೆಡೆ ಚೀನಾದ ಶಾಂಗೈ ಷೇರು ಮಾರುಕಟ್ಟೆ ಶೇಕಡಾ 1.6ರಷ್ಟು ಕುಸಿದಿದೆ.

ನಿಫ್ಟಿ ಸಹ ಸಿಂಗಾಪೂರ ವಿನಿಮಯ ಮಾರುಕಟ್ಟೆಯಲ್ಲಿ 15 ಅಂಕಗಳ ಕುಸಿತ ಕಂಡುಬಂದು 7 ಸಾವಿರದ 566ರಲ್ಲಿ ವಹಿವಾಟು ನಡೆಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments