ವಾಣಿಜ್ಯ

ವಿಜಯ್ ಮಲ್ಯಗೆ ಮತ್ತೊಂದು ಹಿನ್ನಡೆ, ಪಾಸ್ ಪೋರ್ಟ್ ರದ್ದು ಕೋರಿ ಇಡಿ ಮನವಿ

Lingaraj Badiger
ನವದೆಹಲಿ: ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಜಾರಿ ನಿರ್ದೇಶನಾಲಯ(ಇಡಿ) ಅವರ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಬುಧವಾರ ಪಾಸ್ ಪೋರ್ಟ್ ಕಚೇರಿಗೆ ಕೇಳಿಕೊಂಡಿದೆ.
ಮದ್ಯದ ದೊರೆಗೆ ಜಾರಿ ನಿರ್ದೇಶನಾಲಯ ಈಗಾಗಲೇ ಮೂರು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗದ ವಿಜಯ್ ಮಲ್ಯ ಅವರ ವಿರುದ್ದ ಇಡಿ ಈ ಕ್ರಮ ತೆಗೆದುಕೊಂಡಿದೆ.
ಐಡಿಬಿಐ ಬ್ಯಾಂಕ್ ನಿಂದ ಪಡೆದ 900 ಕೋಟಿ ರುಪಾಯಿ ಸಾಲವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮುಂದೆ ವಿಜಯ್ ಮಲ್ಯ ವಿಚಾರಣೆಗೆ ಹಾಜರಾಗಬೇಕಿತ್ತು.
ಕಳೆದ ವರ್ಷ ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧರಿಸಿ ಇಡಿ ವಿಜಯ್ ಮಲ್ಯ ವಿರುದ್ಧ ಹಣ ದುರ್ಬಳಕೆ ಪ್ರಕರಣ ದಾಖಲಿಸಿಕೊಂಡಿದೆ.
SCROLL FOR NEXT