ವಾಣಿಜ್ಯ

31-40 ವರ್ಷದ ಉದ್ಯೋಗಿಗಳು ಶೇ.61ರಷ್ಟು ಆರ್ಥಿಕ ಅಪರಾಧಗಳಲ್ಲಿ ಭಾಗಿ

Lingaraj Badiger
ಮುಂಬೈ: 31ರಿಂದ 40ವರ್ಷದೊಳಗಿನ ಉದ್ಯೋಗಗಳೇ ದೇಶದ ಕಂಪನಿಗಳಲ್ಲಿ ನಡೆಯುವ ಶೇ,61ರಷ್ಟು ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪಿಡಬ್ಲ್ಯೂಸಿ ವರದಿ ಮಾಡಿದೆ.
ದೇಶದಲ್ಲಿ ಪ್ರತಿ ನಾಲ್ಕು ಕಂಪನಿಗಳಲ್ಲಿ ಒಂದು ಕಂಪನಿ ಇಂತಹ ಆರ್ಥಿಕ ಅಪರಾಧದ ಪರಿಣಾಮವನ್ನು ಎದುರಿಸುತ್ತಿವೆ ಎಂದ ವರದಿ ತಿಳಿಸಿದೆ.
ವರದಿಯ ಪ್ರಕಾರ, ಶೇ.43ರಷ್ಟು ಪ್ರಕರಣಗಳಲ್ಲಿ ಮಧ್ಯಮ ಮಟ್ಟದ ಉದ್ಯೋಗಿಗಳು ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಇದು ಶೇ.35ರಷ್ಟಿದೆ. 
ಜುಲೈ 2015ರಿಂದ ಫೆಬ್ರವರಿ 2016ರ ವರೆಗೆ ದೇಶದ 17 ಕೈಗಾರಿಕಾ ವಲಯಗಳಲ್ಲಿ ಸಮೀಕ್ಷೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.
SCROLL FOR NEXT