ಪುಣೆ: ಭಾರತ ಆರ್ಥಿಕವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂಬ ಸುಖದ ಭ್ರಮೆಗೆ ಒಳಗಾಗದೆ, ತಮ್ಮ ಏಕ ಕಣ್ಣಿನ ರಾಜ ಹೇಳಿಕೆಯ ಸನ್ನಿವೇಶವನ್ನು ವಿವರಿಸಿ ಭಾರತ ಆರ್ಥಿಕವಾಗಿ ಇನ್ನಷ್ಟು ಸಾಧಿಸಬೇಕಾಗಿದೆ ಎಂದು ಹೇಳಿದರು.
ಭಾರತದ ಕೇಂದ್ರ ಬ್ಯಾಂಕಿನ ಮುಖ್ಯಸ್ಥನಾಗಿ ದೇಶ ವಿಷಯ ಸಂಬಂಧಿ ಮಾತನಾಡಬೇಕಾಗುತ್ತದೆ. ಭಾರತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದು ತಾವು ಸುಖ ಭ್ರಮೆಗೆ ಒಳಗಾಗಲು ಸಾಧ್ಯವಿಲ್ಲ ಎಂದರು.
ತಮ್ಮ ಏಕ ಕಣ್ಣಿನ ರಾಜ ಹೇಳಿಕೆಗೆ ವಿವರಣೆ ನೀಡಿದ ಅವರು, ಸಂದರ್ಭದಿಂದ ಹೊರಗೆ ಬಳಸಲಾಗಿದೆ. ನನ್ನ ಹೇಳಿಕೆಯಿಂದ ದೃಷ್ಟಿದೋಷವುಳ್ಳವರಿಗೆ ನೋವಾಗಿದ್ದರೆ ಕ್ಷಮಿಸಬೇಕೆಂದು ಕೋರಿದರು.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲಿ ಭಾರತೀಯರ ತಲಾ ಆದಾಯ ಅತ್ಯಂತ ಕನಿಷ್ಠವಾಗಿದೆ. ನಾವು ಗುರಿ ತಲುಪಲು ಇನ್ನಷ್ಟು ಬಹುದೂರ ಸಾಗಬೇಕಾಗಿದೆ. ಭಾರತದ ಪ್ರಸ್ತುತ ಇರುವ ಆರ್ಥಿಕ ಪರಿಸ್ಥಿತಿಯನ್ನು ಇನ್ನು 20 ವರ್ಷಗಳವರೆಗೆ ಕಾಪಾಡಿಕೊಂಡು ಹೋದರೆ ನಮ್ಮ ಗುರಿ ತಲುಪಬಹುದು ಎಂದರು.
ತಮ್ಮ ಹೇಳಿಕೆಯನ್ನು ಮಾಧ್ಯಮದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. ಇವರ ಹೇಳಿಕೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಸಚಿವೆ ನಿರ್ಮಲಾ ಸೀತಾರಾಮ್ ವಿರೋಧ ವ್ಯಕ್ತಪಡಿಸಿದ್ದಾರೆ.