ನವದೆಹಲಿ: ಮುಂಬೈ ನಲ್ಲಿ ಮುಖೇಶ್ ಅಂಬಾನಿ ಘೋಷಿಸಿರುವ ರಿಲಯನ್ಸ್ ಜಿಯೋ ಆಫರ್ ಗಳು ಬೇರೆ ಸಂಸ್ಥೆಗಳಿಗೆ ಪೈಪೋಟಿ ನೀಡುವಂತಿದ್ದು, ದೇಶದ ಗ್ರಾಮೀಣ ಪ್ರದೇಶಗಳನ್ನು ಡಿಜಿಟಲೀಕರಣ ಗಿಳಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಿಲಯನ್ಸ್ ಜಿಯೋ ನೆಟ್ವರ್ಕ್ ನಿಂದ ಮಾಡುವ ಎಲ್ಲಾ ವಾಯ್ಸ್ ಕರೆಗಳು ಹಾಗೂ ಅಗ್ಗದ ಡಾಟಾ ಪ್ಲಾನ್ ಗಳನ್ನು ಘೋಷಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಜ್ಞರು, ಮಾಹಿತಿ ಸಂಗ್ರಹಣೆಗೆ ಮುಂದಿನ ದಿನಗಳಲ್ಲಿ ಭವಿಷ್ಯ ಇದ್ದು, ಜಿಯೋ ಇದಕ್ಕಾಗಿ ಸಂಪೂರ್ಣವಾಗಿ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಕ್ರಾಂತಿಯನ್ನು ಯಶಸ್ವಿಗೊಳಿಸಲು, ಡಿಜಿಟಲ್ ಮೈನಿಂಗ್( ಮಾಹಿತಿ ಸಂಗ್ರಹಣೆ) ಅಗತ್ಯವಾಗಿದೆ. ಜಿಯೋ ನೆಟ್ವರ್ಕ್ ತನ್ನ ಘೋಷಣೆಗಳ ಮೂಲಕ 450 ಮಿಲಿಯನ್ ಫೋನ್ ಬಳಕೆದಾರರನ್ನು ತಲುಪುವ ಗುರಿ ಹೊಂದಿರುವ ಸಾಧ್ಯತೆ ಇದೆ ಎಂದು ಮೊಬೈಲ್ ಸಾಧನಗಳು ಮತ್ತು ಪರಿಸರ ವ್ಯವಸ್ಥೆಯ ವಿಶ್ಲೇಷಕ ತರುಣ್ ಪಾಠಕ್ ಅಭಿಪ್ರಾಯಪಟ್ಟಿದ್ದಾರೆ. ರಿಲಯನ್ಸ್ ನ ಘೋಷಣೆಗಳಿಂದ ಜಿಯೋ ಮೊಬೈಲ್ ಗ್ರಾಹಕರ ಮೊದಲ ಆಯ್ಕೆಯಾಗಿರಲಿದ್ದು, ಉಳಿದ ನೆಟ್ವರ್ಕ್ ಗಳಿಗೆ ಸ್ಪರ್ಧೆಯೊಡ್ಡಲಿದೆ ಎಂದು ತರುಣ್ ಪಾಠಕ್ ಹೇಳಿದ್ದಾರೆ.