ಸಾಂದರ್ಭಿಕ ಚಿತ್ರ 
ವಾಣಿಜ್ಯ

ಪ್ರಸಕ್ತ ವರ್ಷದ ದ್ವೈಮಾಸಿಕದಲ್ಲಿ ಬಿ ಎಸ್ ಎನ್ ಎಲ್ ಗೆ ೧೭೨೧ ಕೋಟಿ ನಷ್ಟ: ಕೇಂದ್ರ ಸರ್ಕಾರ

ಸರ್ಕಾರಿ ಒಡೆತನದ ಭಾರತ್ ಸಂಚಾರ ನಿಗಮ ಲಿಮಿಟೆಡ್ ಸಂಸ್ಥೆ, ಏಪ್ರಿಲ್ ಮತ್ತು ಜೂನ್ ನಡುವೆ ೧೭೨೧ ಕೋಟಿ ರೂ ನಷ್ಟ ಅನುಭವಿಸಿದೆ ಮತ್ತು ಈ ಸಮಯದಲ್ಲಿ ಒಟ್ಟು ಆದಾಯ ೭೩೩೧ ಕೋಟಿ ರೂ

ನವದೆಹಲಿ: ಸರ್ಕಾರಿ ಒಡೆತನದ ಭಾರತ್ ಸಂಚಾರ ನಿಗಮ ಲಿಮಿಟೆಡ್ ಸಂಸ್ಥೆ, ಏಪ್ರಿಲ್ ಮತ್ತು ಜೂನ್ ನಡುವೆ ೧೭೨೧ ಕೋಟಿ ರೂ ನಷ್ಟ ಅನುಭವಿಸಿದೆ ಮತ್ತು ಈ ಸಮಯದಲ್ಲಿ ಒಟ್ಟು ಆದಾಯ ೭೩೩೧ ಕೋಟಿ ರೂ ಎಂದು ರಾಜ್ಯಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ. 
"೨೦೧೩-೧೪ ರಲ್ಲಿ ಒಟ್ಟು ಆದಾಯ ೨೬,೧೫೩ ಕೋಟಿ ಇದ್ದು, ಇದು ೨೦೧೪-೨೦೧೫ ಕ್ಕೆ ೨೭,೨೪೨ ಕೋಟಿಗೆ ಹೆಚ್ಚಳಗೊಂಡಿತ್ತು ಮತ್ತು ೨೦೧೫-೧೬ ನೇ ಸಾಲಿನಲ್ಲಿ ೨೮,೪೪೯ ಕೋಟಿಗೆ ವೃದ್ಧಿಸಿದೆ" ಎಂದು ಸಂಪರ್ಕ ಸಚಿವ ಮನೋಜ್ ಸಿಂಹ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. 
೨೦೧೬-೧೭ ರ ದ್ವೈಮಾಸಿಕದಲ್ಲಿ (ಏಪ್ರಿಲ್ ನಿಂದ ಜೂನ್ ನಡುವೆ) ಬಿ ಎಸ್ ಎನ್ ಎಲ್ ಚಟುವಟಿಕೆಗಳಿಂದ ೭೧೮೩ ಕೋಟಿ ಆದಾಯ ಬಂದಿದೆ. ಈ ಸಮಯದಲ್ಲೇ ೧೭೨೧ ಕೋಟಿ ರೂ ನಷ್ಟ ಅನುಭವಿಸಿದೆ.
ಸಾರ್ವಜನಿಕ ಕ್ಷೇತ್ರದ ಟೆಲೆಕಾಂ ಸಂಸ್ಥೆ ೨೦೧೩-೧೪ ರಲ್ಲಿ ೭೦೧೯ ಕೋಟಿ ನಷ್ಟ, ೨೦೧೪-೧೫ ರಲ್ಲಿ ೮,೨೩೪ ಕೋಟಿ ನಷ್ಟ ಅನುಭವಿಸಿದ್ದರೆ, ೨೦೧೫-೧೬ ರ ನಷ್ಟ ಅರ್ಧಕ್ಕೆ ಇಳಿದು, ೩೮೮೦ ಕೋಟಿ ಎಂದು ಸಚಿವರು ತಿಳಿಸಿದ್ದಾರೆ. 
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ, ಹೆಚ್ಚಳ ಬಿಲ್  ಕಳುಹಿಸಿದ್ದಕ್ಕೆ ಏರ್ಟೆಲ್ ವಿರುದ್ಧ ೫೧೨ ದೂರುಗಳು, ವೊಡಾಫೋನ್ ವಿರುದ್ಧ ೩೯೩, ಐಡಿಯಾ ವಿರುದ್ಧ ೧೭೨ ಮತ್ತು ರಿಲಾಯೆನ್ಸ್ ವಿರುದ್ಧ ೧೯೭ ದೂರುಗಳು, ೨೦೧೬ ರಲ್ಲಿ ಟೆಲೆಕಾಂ ನಿಯಂತ್ರಣ ಮಂಡಳಿ ಟಿ ಆರ್ ಎ ಐ ಗೆ ಬಂದಿವೆ ಎಂದು ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT