ಟಾಟಾ ಟೆಲಿಸರ್ವೀಸಸ್ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಿಂದ ಸರ್ವಾನುಮತದಿಂದ ಸೈರಸ್ ಮಿಸ್ತ್ರಿ ವಜಾ
ಟಾಟಾ ಟೆಲಿಸರ್ವೀಸಸ್ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನ ವಜಾಗೊಳಿಸಲಾಗಿದೆ ಎಂದು ಟಾಟಾ ಟೆಲಿ ಸರ್ವೀಸಸ್...
ಮುಂಬಯಿ: ಟಾಟಾ ಟೆಲಿಸರ್ವೀಸಸ್ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನ ವಜಾಗೊಳಿಸಲಾಗಿದೆ ಎಂದು ಟಾಟಾ ಟೆಲಿ ಸರ್ವೀಸಸ್ ತಿಳಿಸಿದೆ.
ಸೈರಸ್ ಮಿಸ್ತ್ರಿ ವಜಾಕ್ಕಾಗಿ ಟಾಟಾ ಟೆಲಿಸರ್ವೀಸಸ್ ನ ಎಲ್ಲಾ ಷೇರುದಾರರು ಸರ್ವಾನುಮತದಿಂದ ನಿರ್ಣಯ ಪಾಸು ಮಾಡಿದ್ದಾರೆ. ಟಾಟಾ ಇಂಡಸ್ಟ್ರೀಸ್ ಮತ್ತು ಟಿಸಿಎಸ್ ನಂತರ ಸೈರಸ್ ಮಿಸ್ತ್ರಿಯನ್ನು ಟಾಟಾ ಟೆಲಿಸರ್ವೀಸ್ ನ ಹುದ್ದೆಗಳಿಂದ ವಜಾಗೊಳಿಸಲಾಗಿದೆ.
ಇಂದು ಟಾಟಾ ಟೆಲಿ ಸರ್ವೀಸ್ ನ ನ ಇಕ್ವಿಟಿ ಶೇರ್ ಹೋಲ್ಡರ್ಸ್ ಗಳಿಗಾಗಿ ಕರೆದಿದ್ದ ಅಸಾಧಾರಣ ಸಾಮಾನ್ಯ ಸಭೆಯಲ್ಲಿ ಮಿಸ್ತ್ರಿ ವಜಾಕ್ಕಾಗಿ ಸಾಮಾನ್ಯ ಕೂಡಲೇ ಜಾರಿಗೆ ಬರುವಂತೆ ನಿರ್ಣಯ ಪಾಸು ಮಾಡಲಾಯಿತು ಎಂದು ಟಾಟಾ ಟೆಲಿ ಸರ್ವೀಸಸ್ ತಿಳಿಸಿದೆ.
ನಿನ್ನೆಯಷ್ಟೇ ಇಜಿಎಂ ಮೀಟಿಂಗ್ ನಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ ನ ಕ್ರೌನ್ ಜ್ಯುವೆಲ್ಲರ್ಸ್, ಟಿಸಿಎಸ್ ನ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಮತ ಚಲಾಯಿಸಿ ಅವರನ್ನು ಹುದ್ದೆಗಳಿಂದ ವಜಾಗೊಳಿಸಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.