ಸಾಂದರ್ಭಿಕ ಚಿತ್ರ 
ವಾಣಿಜ್ಯ

'ಆರ್' ಸರಣಿಯ ಹೊಸ 500 ರೂಪಾಯಿ ನೋಟು ಸದ್ಯದಲ್ಲಿಯೇ ಬಿಡುಗಡೆ: ಆರ್ ಬಿಐ

ಮಹಾತ್ಮಾ ಗಾಂಧಿ ಭಾವಚಿತ್ರವಿರುವ ಆರ್ ಸರಣಿಯ ಹೊಸ 500 ರೂಪಾಯಿ ನೋಟುಗಳನ್ನು...

ನವದೆಹಲಿ: ಮಹಾತ್ಮಾ ಗಾಂಧಿ ಭಾವಚಿತ್ರವಿರುವ ಆರ್ ಸರಣಿಯ ಹೊಸ 500 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ರಿಸರ್ವ್ ಬ್ಯಾಂಕ್ ಈಗಾಗಲೇ ಮಹಾತ್ಮಾ ಗಾಂಧಿ ಭಾವಚಿತ್ರವಿರುವ ಹೊಸ 500 ರೂಪಾಯಿ ನೋಟುಗಳನ್ನು ಚಲಾವಣೆಗೆ ಬಿಟ್ಟಿದೆ. ಇದೀಗ ಸಂಖ್ಯೆಯ ಎರಡೂ ಬದಿಗಳಲ್ಲಿ ಆರ್ ಸರಣಿಯ ಅದರಲ್ಲಿ ಗವರ್ನರ್ ಡಾ.ಉರ್ಜಿತ್ ಆರ್ ಪಟೇಲ್ ಅವರ ಸಹಿಯಿರುವ ನೋಟುಗಳನ್ನು ಮತ್ತು ನೋಟಿನ ಹಿಂದೆ 2016ನೇ ವರ್ಷದಲ್ಲಿ ಮುದ್ರಣವಾಗಿದೆ ಎಂದು ನಮೂದಿಸಿರುವ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
 ಇದರ ಜೊತೆಗೆ ಸದ್ಯದಲ್ಲಿಯೇ ಮಹಾತ್ಮಾ ಗಾಂಧಿ ಸರಣಿ-2005ರ 50 ರೂ ಮುಖಬೆಲೆಯ ಆರ್ ಮತ್ತು ಎಲ್ ಸರಣಿಯ ನೋಟುಗಳನ್ನು ಕೂಡ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ.
ಈ ಮಧ್ಯೆ ಇದೇ 30ರವರೆಗೆ ಒಂದು ದಿನ ಮಾತ್ರ 5,000ಕ್ಕಿಂತ ಹೆಚ್ಚು, 50,000ಕ್ಕಿಂತ ಕಡಿಮೆ ಮೊತ್ತ ಜಮೆ ಮಾಡಬಹುದು ಎಂಬ ಷರತ್ತುಗಳಿಗೆ ಕಟ್ಟುನಿಟ್ಟಿನ ಷರತ್ತನ್ನು ಆರ್ ಬಿಐ ವಿಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ದೇಶದ ಮೇಲೆ ಯುದ್ಧದ ಪರಿಣಾಮ ತಗ್ಗಿಸಲು ಕೇಂದ್ರ ಸಜ್ಜು; ಪ್ರಧಾನಿ ಮೋದಿ ಮಹತ್ವದ ಸಭೆ, LPG-LNG ಲಭ್ಯತೆ ಖಚಿತಪಡಿಸಲು ಖಡಕ್ ಸೂಚನೆ

'13 ರೂ. ಮೌಲ್ಯದ ಚೀಲಗಳನ್ನು 52 ರೂ.ಗೆ ಖರೀದಿ’: IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ಶಾಕ್, ತನಿಖೆಗೆ ಅನುಮತಿ

SSLC ಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್: ಸರ್ಕಾರದ ನಿರ್ಧಾರ ವಿರುದ್ಧ ಹೈಕೋರ್ಟ್ ಗೆ ಅರ್ಜಿ

ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಬೆಂಗಳೂರು: ಧರ್ಮರಾಯಸ್ವಾಮಿ ದೇವಸ್ಥಾನದಿಂದ ವೈಭವದ ಕರಗ ಆರಂಭ, ಲಕ್ಷಾಂತರ ಭಕ್ತರು ಸಾಕ್ಷಿ

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

SCROLL FOR NEXT