ಮುಂಬೈ: ಗೌಪ್ಯತೆ ಉಲ್ಲಂಘನೆ ಹಾಗೂ ಅನುಚಿತ ವರ್ತನೆ ಆರೋಪದ ಮೇಲೆ ಟಾಟಾ ಸನ್ಸ್ ಮಂಗಳವಾರ ವಜಾಗೊಂಡ ಅದ್ಯಕ್ಷ ಸೈರಸ್ ಮಿಸ್ತ್ರಿ ಅವರಿಗೆ ಲೀಗಲ್ ನೋಟಿಸ್ ನೀಡಿದೆ.
ಟಾಟಾ ಸನ್ಸ್ ನಿರ್ದೇಶಕರಾಗಿ ನೀವು ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ನಿಮ್ಮ ಕುಟುಂಬ ಒಡೆತನದ ಕಂಪನಿಗಳಿಗೆ ರವಾನಿಸುವ ಮೂಲಕ ಗೌಪ್ಯತೆಯ ಒಪ್ಪಂದವನ್ನು ಉಲ್ಲಂಘಿಸಿದ್ದೀರಿ. ಹೀಗಾಗಿ ಟಾಟಾ ನೀತಿ ಸಂಹಿತೆಯಡಿ ನೋಟಿಸ್ ನೀಡಿರುವುದಾಗಿ ಲೀಗಲ್ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯವರನ್ನು ಪದಚ್ಯುತಗೊಳಿಸಲು ಕಾರಣವಾದ ಸಂಗತಿಗಳ ಬಗ್ಗೆ 9 ಪುಟಗಳ ಪತ್ರಿಕಾ ಪ್ರಕಟಣೆ ನೀಡಿದ್ದ ಸಂಸ್ಥೆ, ಟಾಟಾ ಸಮೂಹದ ಸಂಸ್ಥೆಗಳನ್ನು ಮಿಸ್ತ್ರಿ ತಮ್ಮ ವಶಕ್ಕೆ ಪಡೆಯುವ ಸಂಚು ನಡೆಸಿ ವಿಶ್ವಾಸದ್ರೋಹ ಎಸಗಿದ ಹಿನ್ನೆಲೆಯಲ್ಲಿ ಅವರನ್ನು ವಜಾ ಮಾಡಬೇಕಾಯಿತು ಎಂದು ಹೇಳಿತ್ತು. ಇದೀಗ ಅವರಿಗೆ ಲೀಗಲ್ ನೋಟಿಸ್ ನೀಡುವ ಮೂಲಕ ಮತ್ತೊಂದು ಶಾಕ್ ನೀಡಿದೆ.