ಮುಂಬೈ: ಭಾರತೀಯ ಬ್ಯಾಂಕ್ ಶೇರುಗಳು ವಿಪರೀತ ಮಾರಾಟ ಹಾಗೂ ವಿದೇಶಿ ಫಂಡ್ ನ ನಿರಂತರ ಹೊರಹರಿವುನಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಗುರುವಾರ 778.91 ಅಂಕಗಳ ಭಾರೀ ಕುಸಿತಕ್ಕೆ ಗುರಿಯಾಗಿ 22,979.99 ಅಂಕಗಳ ಮಟ್ಟಕ್ಕೆ ಜಾರಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 234.50 ಅಂಕಗಳ ಕುಸಿತವನ್ನು ಕಂಡು 2 6,981.20 ಅಂಕಗಳ ಮಟ್ಟಕ್ಕೆ ಇಳಿಯಿತು.
ಜಾಗತಿಕ ಆರ್ಥಿಕ ಹಿಂಜರಿತದ ಇನ್ನೊಂದು ಭೀತಿ ಸೃಷ್ಟಿಯಾಗಿರುವಂತೆಯೇ ಇಂದು ಐರೋಪ್ಯ ಶೇರು ಮಾರುಕಟ್ಟೆಗಳು ಶೇ.3.1ರಷ್ಟು ಕುಸಿದು ತೀವ್ರ ಆತಂಕಕಕ್ಕೆ ಕಾರಣವಾದವು. ಐರೋಪ್ಯ ಬ್ಯಾಂಕ್ ಶೇರುಗಳು ಮತ್ತು ಗಣಿಗಾರಿಕೆ ಕಂಪೆನಿಗಳ ಶೇರುಗಳು ಇಂದು ಭಾರೀ ಪ್ರಮಾಣದಲ್ಲಿ ಮಾರಾಟಕ್ಕೆ ಗುರಿಯಾದಾಗ ಐರೋಪ್ಯ ಶೇರು ಸೂಚ್ಯಂಕ ಎಸ್‌ಟಿಓಎಕ್ಸ್‌ಎಕ್ಸ್ 600 ಶೇ.3.1ರ ಕುಸಿತಕ್ಕೆ ಗುರಿಯಾಯಿತು.
ಇದನ್ನು ಅನುಸರಿಸಿ ಈಗಾಗಲೇ ಎನ್‌ಪಿಎ ಒತ್ತಡಕ್ಕೆ ಗುರಿಯಾಗಿರುವ ಭಾರತೀಯ ಬ್ಯಾಂಕಗಳು ಶೇರುಗಳು ಭರಾಟೆಯ ಮಾರಾಟವನ್ನು ಕಂಡು ಮಧ್ಯಾಹ್ನದ ಅವಧಿಯ ಬಳಿಕ ಸೆನ್ಸೆಕ್ಸ್ 700ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಚೀನದ ಆರ್ಥಿಕ ನಿಧಾನಗತಿಯಿಂದಾಗಿ ವಿಶ್ವ ಆರ್ಥಿಕತೆಯಲ್ಲಿ ದೌರ್ಬಲ್ಯ ಮಡುಗಟ್ಟಿದ್ದು ಇದರಿಂದ ಅಮೆರಿಕನ್ ಆರ್ಥಿಕ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಉಂಟಾಗಲಿದೆ ಎಂದು ಅಮೆರಿಕದ ಫೆಡರಲ್ ರಿಸರ್ವ್‌ನ ಅಧ್ಯಕ್ಷೆ ಜನೆಟ್ ಎಲ್ಲೆನ್ ಭೀತಿ ವ್ಯಕ್ತಪಡಿಸಿದ್ದೇ ಇಂದಿನ ಜಾಗತಿಕ ಶೇರು ಕುಸಿತಕ್ಕೆ ಕಾರಣವಾಯಿತು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics