ಡಿಸೆಂಬರ್ ನ ಕೈಗಾರಿಕಾ ಉತ್ಪಾದನೆ ಕುಸಿತ
ಕೈಗಾರಿಕಾ ಉತ್ಪಾದನೆ ಕಳೆದ ಡಿಸೆಂಬರ್ನಲ್ಲಿ ಶೇ.(-)1.3 ರಷ್ಟು ಕುಸಿದಿದೆ. 2014 ರ ಡಿಸೆಂಬರ್ ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.3 .6 ರಷ್ಟಿತ್ತು.
ನವದೆಹಲಿ: ಕೈಗಾರಿಕಾ ಉತ್ಪಾದನೆ ಕಳೆದ ಡಿಸೆಂಬರ್ನಲ್ಲಿ ಶೇ.(-)1.3 ರಷ್ಟು ಕುಸಿದಿದೆ. 2014 ರ ಡಿಸೆಂಬರ್ ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.3 .6 ರಷ್ಟಿತ್ತು.
ಫೆ.12 ರಂದು ಬಿಡುಗಡೆಯಾಗಿರುವ ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಮಾಹಿತಿ ಪ್ರಕಾರ, ಉತ್ಪಾದನೆ ಕುಸಿತವಾಗಿದ್ದರೂ ಕಳೆದ ತಿಂಗಳಿಗಿಂತ(-)3 .42 ಕ್ಕಿಂತ ಈ ತಿಂಗಳು ಕಡಿಮೆ ಕುಸಿತ ದಾಖಲಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಒಟ್ಟಾರೆ ಕಾರ್ಖಾನೆ ಉತ್ಪಾದನೆ ಶೇ.3 .1 ಏರಿಕೆಯಾಗಿದೆ.
ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕೈಗಾರಿಕಾ ಉತ್ಪಾದನೆಯ ಒಟ್ಟು ಬೆಳವಣಿಗೆ ಶೇ.2.6 ರಷ್ಟಿತ್ತು. ಉತ್ಪಾದನೆ ಕುಂಟಿತವಾಗಿರುವುದರಿಂದ ಡಿಸೆಂಬರ್ ನ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.(-) 2 .4 ರಷ್ಟಾಗಿದ್ದರೆ, ವಿದ್ಯುತ್ ಉತ್ಪಾದನೆಯಲ್ಲಿ ಶೇ.3 .2 ರಷ್ಟು ಏರಿಕೆ ದಾಖಲಾಗಿದೆ. ಇನ್ನು ಗಣಿಗಾರಿಕೆಯ ಉತ್ಪಾದನೆ ಶೇ.2 .9 ರಷ್ಟು ಏರಿಕೆಯಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.