ರು.600 ಕುಸಿದ ಚಿನ್ನ, ಪ್ರತಿ 10 ಗ್ರಾಂ.ಗೆ ರು.29,050
ಆಭರಣ ಮಾರಾಟಗಾರರ ಬೇಡಿಕೆ ಕುಸಿತದಿಂದ ಚಿನಿವಾರ ಪೇಟೆಯಲ್ಲಿ ಚಿನ್ನದ ದರವು ರು.600 ಕುಸಿದು ಪ್ರತಿ 10 ಗ್ರಾಂ.ಗಳಿಗೆ...
ನವದೆಹಲಿ: ಆಭರಣ ಮಾರಾಟಗಾರರ ಬೇಡಿಕೆ ಕುಸಿತದಿಂದ ಚಿನಿವಾರ ಪೇಟೆಯಲ್ಲಿ ಚಿನ್ನದ ದರವು ರು.600 ಕುಸಿದು ಪ್ರತಿ 10 ಗ್ರಾಂ.ಗಳಿಗೆ ರು.29,050ಕ್ಕೆ ಮುಟ್ಟಿದೆ.
ಚಿನಿವಾರ ಪೇಟೆಯ ಶನಿವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ ರು.29,050 ಯಾಗಿದ್ದು, ಇದರೊಂದಿಗೆ 21 ತಿಂಗಳ ಗರಿಷ್ಠ ಹಂತದಿಂದ ಕಡಿಮೆಯಾಗಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿನ ನೀರಸ ವಹಿವಾಟು ಮತ್ತು ಆಭರಣ ತಯಾರಕರು ಸಹ ಹೆಚ್ಚು ಖರೀದಿಗೆ ಮುಂದಾಗದಿದ್ದರಿಂದ ಈ ನಷ್ಟ ಕಂಡಿದೆ. ಇದರೊಂದಿಗೆ ಸತತ ಹನ್ನೊಂದು ದಿನಗಳ ಏರಿಕೆಗೆ ತಡೆ ಬಿದ್ದಾಂತಾಗಿದೆ.
ಬೆಳ್ಳಿ ದರಗಳು ಸಹ ಪ್ರತಿ ಕೆಜಿಗೆ ರು.50 ಕಡಿಮೆಯಾಗಿ ರು.37,800ಕ್ಕೆ ತಲುಪಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.