ಸ್ಮಾರ್ಟ್‌ಫೋನ್ ಫ್ರೀಡಂ 251 
ವಾಣಿಜ್ಯ

ಫ್ರೀಡಂ 251: ಒಂದು ಫೋನ್ ಮಾರಾಟವಾದರೆ ರು. 31 ಲಾಭ

ರು. 251ರ ಫೋನ್ ರು. 40 ಡಿಲಿವರಿ ಚಾರ್ಜ್ ಸೇರಿ ರು.291ಗೆ ಗ್ರಾಹಕರಿಗೆ ತಲುಪಲಿದೆ. ಆದಾಗ್ಯೂ, ಪ್ರತಿಯೊಂದು ಯುನಿಟ್ ಮಾರಾಟದಿಂದ ಕಂಪನಿಗೆ...

ನವದೆಹಲಿ: ವಿಶ್ವದ ಅತೀ ಅಗ್ಗದ ಸ್ಮಾರ್ಟ್‌ಫೋನ್ ಫ್ರೀಡಂ 251 ಈಗಾಗಲೇ ಸಾಕಷ್ಟು ಸುದ್ದಿ ಮಾಡಿ ಗಮನ ಸೆಳೆದಿದೆ.  ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಎಂಬ ಕಂಪನಿ ಈ  ಫೋನ್ ತಯಾರಿಸುತ್ತಿದ್ದು, ಬುಕಿಂಗ್ ಮಾಡಿದವರಿಗೆ ನಾಲ್ಕು ತಿಂಗಳಲ್ಲಿ ಈ ಫೋನ್ ಕೈಸೇರಲಿದೆ.
ರು. 251ರ ಫೋನ್  ರು. 40 ಡಿಲಿವರಿ ಚಾರ್ಜ್ ಸೇರಿ ರು.291ಗೆ ಗ್ರಾಹಕರಿಗೆ ತಲುಪಲಿದೆ. ಆದಾಗ್ಯೂ, ಪ್ರತಿಯೊಂದು ಯುನಿಟ್ ಮಾರಾಟದಿಂದ ಕಂಪನಿಗೆ ರು. 31 ಲಾಭವಾಗಲಿದೆ ಎಂದು ರಿಂಗಿಂಗ್ ಬೆಲ್ಸ್ ಸಂಸ್ಥಾಪಕ ಮೋಹಿತ್ ಗೋಯೆಲ್ ಹೇಳಿದ್ದಾರೆ.
ಫ್ರೀಡಂ 251 ಫೋನ್ ಬಗ್ಗೆ ಈಗಾಗಲೇ ಹಲವಾರು ಊಹಾಪೋಹಗಳು ಕೇಳಿ ಬರುತ್ತಿದ್ದು, ಇದನ್ನೆಲ್ಲಾ ಮೋಹಿತ್ ಗೋಯೆಲ್ ಅಲ್ಲಗೆಳೆದಿದ್ದಾರೆ.
ಯಾಕೆ ಎಲ್ಲರು ನನ್ನನ್ನು ಕಾಡುತ್ತಿದ್ದಾರೆ? ನಾನೇನು ತಪ್ಪು ಮಾಡಿದ್ದೇನೆ? ನಾನು ಹಣವನ್ನು ಕದ್ದು ಪರಾರಿಯಾಗಿದ್ದೇನೆ ಎಂಬ ಸುದ್ದಿಯನ್ನು ಯಾಕೆ ಹಬ್ಬಿಸುತ್ತಿದ್ದಾರೆ? ಎಲ್ಲ ಸ್ಟಾರ್ಟ್‌ಅಪ್ ಗಳಂತೆ ನಾನು ಈ ವ್ಯವಹಾರ ಆರಂಭಿಸಿದ್ದೇನೆ. ನನ್ನ ವ್ಯವಹಾರ ಯೋಜನೆಗಳೆಲ್ಲವೂ ಸಿದ್ಧವಾಗಿವೆ ಎಂದು ಗೋಯೆಲ್ ಹೇಳಿದ್ದಾರೆ. 
ಮೂರು ದಿನಗಳಲ್ಲಿ 70 ಮಿಲಿಯನ್ ಜನರು ಈ ಫೋನ್‌ಗಾಗಿ ಬುಕಿಂಗ್ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ. 
ಮೊದಲಿನ ಹಂತದಲ್ಲಿ 25 ಲಕ್ಷ ಯುನಿಟ್ ವಿತರಣೆ ಮಾಡಲಾಗುವುದು. ಮುಂದಿನ ಹಂತದಲ್ಲಿ 25 ಲಕ್ಷವನ್ನು ಆಫ್‌ಲೈನ್ ಆಗಿ ವಿತರಣೆ ಮಾಡಲಾಗುವುದು. ಜೂನ್ 30ರ ಒಳಗೆ ಫೋನ್ ಎಲ್ಲರ ಕೈ ಸೇರಲಿದೆ ಎಂದು ಗೋಯಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!