ಫ್ರೀಡಂ 652 ಸ್ಮಾರ್ಟ್‌ಫೋನ್ ವೆಬ್‌ಸೈಟ್
ನವದೆಹಲಿ: ಅಗ್ಗದ ಸ್ಮಾರ್ಟ್‌ಫೋನ್ ಫ್ರೀಡಂ 251 ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಫ್ರೀಡಂ 651 ಸ್ಮಾರ್ಟ್‌ಫೋನ್ ಸುದ್ದಿ ಮಾಡಿದೆ.
freedom651.com ಎಂಬ ವೆಬ್‌ಸೈಟ್‌ನಲ್ಲಿ ಈ ಫೋನ್‌ಗಾಗಿ ಬುಕಿಂಗ್ ಮಾಡಬಹುದಾಗಿದೆ. ಕೌತುಕದ ವಿಷಯವೇನೆಂದರೆ ಈ ಫೋನ್‌ಗಾಗಿ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫ್ರೀಡಂ 651 ಸ್ಮಾರ್ಟ್‌ಫೋನ್ ನಿಮ್ಮ ಕೈ ಸೇರಲಿದೆ.
ಅಚ್ಚರಿ ಪಡಬೇಡಿ, ಇದೊಂದು ಅಣುಕು ವೆಬ್‌ಸೈಟ್ ! ಫ್ರೀಡಂ 215 ವೆಬ್‌ಸೈಟ್ ನಂತೆಯೇ ಇದನ್ನು ರೂಪಿಸಿದ್ದು, Doesn't Ring Bells Pvt Ltd ಎಂಬ ಕಂಪನಿಗೆ ಇದು ಸೇರಿದೆ ಎಂದು ಉಲ್ಲೇಖಿಸಲಾಗಿದೆ ( ಫ್ರೀಡಂ 251, ರಿಂಗಿಂಗ್ ಬೆಲ್ಸ್ ಕಂಪನಿಯದ್ದು, ಅದನ್ನು ಅಣಕಿಸಲು ಈ ರೀತಿ ಮಾಡಲಾಗಿದೆ). ಶಿವಕಾಶಿಯಲ್ಲಿರುವ ಸ್ಟ್ಯಾಂಡರ್ಡ್ ಪಟಾಕಿ ಕಂಪನಿಯ ಸಹಯೋಗದೊಂದಿಗೆ ಈ ಕಂಪನಿ ರೂಪುಗೊಂಡಿದೆ ಎಂದು ಇಲ್ಲಿ ಹೇಳಲಾಗಿದೆ. ಸ್ಟ್ಯಾಂಡರ್ಡ್ ಪಟಾಕಿ ಕಂಪನಿ ತಯಾರಿಸಿದ 20 ಮಿಲಿಯನ್ ರಾಕೆಟ್ ಪಟಾಕಿಗಳಲ್ಲಿ ಮನುಷ್ಯರನ್ನು ಮಂಗಳ ಗ್ರಹಕ್ಕೆ ಕಳುಹಿಸಲಾಗುವುದು. ಅದಕ್ಕಾಗಿ ರು. 650 ವಾಪತಿ ಮಾಡಬೇಕಾಗಿದೆ ಎಂದು ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
ವೆಬ್‌ಸೈಟ್‌ನಲ್ಲಿ Do not Buy ಬಟನ್ ಅದುಮಿದರೆ 2026 ಜೂನ್ 30ಕ್ಕೆ ಮೊಬೈಲ್ ಫೋನ್ ನಿಮ್ಮ ಕೈಸೇರಲಿದೆ. ಇಲ್ಲಿ ನೀಡಿರುವ ಕಸ್ಟಮರ್ ಕೇರ್ ಸಂಖ್ಯೆ 0420-420420, 4200420. ಅಷ್ಟೇ ಅಲ್ಲ Contact Us ವಿಭಾಗ ಕ್ಲಿಕ್ ಮಾಡಿದರೆ ನಿಮ್ಮ ಅಜ್ಜ, ನೆರೆಹೊರೆಯವರ ಮಾಹಿತಿಯನ್ನೂ ಕೇಳುತ್ತದೆ!
ಫ್ರೀಡಂ 251 ಸ್ಮಾರ್ಟ್ ಫೋನ್‌ನ್ನು ಖರೀದಿಗಾಗಿ ಜನ ಮುಗಿಬಿದ್ದಿರುವಾಗ ಪ್ರಸ್ತುತ ಫೋನ್‌ನ್ನು ಅಣಕಿಸುವ ಸಲುವಾಗಿಯೇ ಫ್ರೀಡಂ 652 ಸ್ಮಾರ್ಟ್‌ಫೋನ್ ವೆಬ್‌ಸೈಟ್‌ನ್ನು ಕ್ರಿಯೇಟ್ ಮಾಡಲಾಗಿದೆ.