ನವದೆಹಲಿ: ಜನರಲ್ಲಿ ಕುತೂಹಲ ಹುಟ್ಟಿಸಿರುವ ಅಗ್ಗದ ಸ್ಮಾರ್ಟ್‌ಫೋನ್ 251 ಈಗ ಕ್ಯಾಶ್ ಆನ್ ಡೆಲಿವರಿ ಹಣ ಪಾವತಿ ಆಯ್ಕೆಯಲ್ಲೂ ಲಭ್ಯವಾಗಲಿದೆ. ಈ ಹಿಂದೆ ಆನ್‌ಲೈನ್ ಮುಖಾಂತರ ಹಣ ಪಾವತಿ ಮಾಡಿದವರಿಗೆ ಮಾತ್ರ ಫೋನ್ ಲಭ್ಯವಿತ್ತು. ಈಗ ಪ್ರಸ್ತುತ ಫೋನ್ ಬುಕ್ ಮಾಡಿದರೆ ಫೋನ್ ಕೈ ಸೇರಿದ ನಂತರವೇ ಹಣ ಪಾವತಿ ಮಾಡಬಹುದಾಗಿದೆ ಎಂದು ರಿಂಗಿಂಗ್ ಬೆಲ್ಸ್ ಕಂಪನಿಯ ಅಧ್ಯಕ್ಷ ಅಶೋಕ್ ಚಡ್ಡಾ ಶುಕ್ರವಾರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಫ್ರೀಡಂ 251 ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆಯಾದ ರಿಂಗಿಂಗ್ ಬೆಲ್ಸ್ ವಿರುದ್ಧ ಆರೋಪ ವಂಚನೆ ಕೇಳಿ ಬಂದಿದೆ. ಫ್ರೀಡಂ 251 ಫೋನ್‌ನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದು, ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಹಲವರಿಗೆ ಸಾಧ್ಯವಾಗಲಿಲ್ಲ. ಇನ್ನು ಬುಕಿಂಗ್ ಮಾಡುವವರಿಗೆ ಕ್ಯಾಶ್ ಆನ್ ಡೆಲಿವರಿ ಪೇಮೆಂಟ್ ಆಯ್ಕೆಯನ್ನೂ ವನೀಡಲಾಗುವುದು. ಇದರಿಂದ ಯಾರಿಗೂ ಯಾವುದೇ ರೀತಿಯ ಸಂದೇಹಕ್ಕೆ ಆಸ್ಪದ ನೀಡುವುದಿಲ್ಲ ಎಂದು ಚಡ್ಡಾ ಹೇಳಿದ್ದಾರೆ.
ಜೂನ್ 30ರ ಒಳಗೆ ಬುಕಿಂಗ್ ಮಾಡಿದ 25 ಲಕ್ಷ ಮಂದಿಗೆ ಫೋನ್ ಪೂರೈಸಲಾಗುವುದು ಎಂದು ರಿಂಗಿಂಗ್ ಬೆಲ್ಸ್ ಹೇಳಿದೆ.