ಬಜೆಟ್ ಬಳಿಕ ಚೇತರಿಸಿಕೊಂಡ ಮಾರುಕಟ್ಟೆ; ಸೆನ್ಸೆಕ್ಸ್ 738 ಅಂಕಗಳ ಏರಿಕೆ
ಬಜೆಟ್ ಮಂಡನೆ ಬಳಿಕ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ವಹಿವಾಟಿನಲ್ಲಿ ಚೇತರಿಸಿಕೊಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 738 ಅಂಕಗಳ...
ಮುಂಬೈ: ಬಜೆಟ್ ಮಂಡನೆ ಬಳಿಕ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ವಹಿವಾಟಿನಲ್ಲಿ ಚೇತರಿಸಿಕೊಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 738 ಅಂಕಗಳ ಏರಿಕೆ ಕಂಡಿದೆ.
ನಿನ್ನೆ 2016 ಮತ್ತು 17 ನೇ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಉದ್ಯಮ ವಲಯ ನಿರೀಕ್ಷಿಸಿದ ಮಟ್ಟದಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದ ಹಿನ್ನಲೆಯಲ್ಲಿ ಹಿನ್ನಡೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಮತ್ತೆ ಚೇತರಿಸಿಕೊಂಡಿದ್ದು, ದಿನದ ಅಂತ್ಯಕ್ಕೆ ಬರೊಬ್ಬರಿ 738 ಅಂಕಗಳ ಏರಿಕೆ ಕಂಡಿದೆ.
ಆರ್ ಬಿಐ ದರ ಕಡಿತ ನಿರೀಕ್ಷೆ ಮತ್ತು ಏಷ್ಯನ್ ಮಾರುಕಟ್ಟೆಯ ಸಕಾರಾತ್ಮಕ ವಹಿವಾಟು ಭಾರತೀಯ ಷೇರುಮಾರುಕಟ್ಟೆಯ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಹೂಡಿಕೆದಾರರು ಇದೀಗ ಅದೇ ನಿರೀಕ್ಷೆಯನ್ನು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಮೇಲೆ ಇಟ್ಟಿದ್ದು, ಮುಂದೆ ಅವರು ಪ್ರಕಟಿಸಲಿರುವ ವಿತ್ತೀಯ ನೀತಿ ಕುರಿತು ಈಗಾಗಲೇ ಸಾಕಷ್ಚು ನಿರೀಕ್ಷೆಗಳು ಗರಿಗೆದರಿವೆ.
ಇದೇ ನಿರೀಕ್ಷೆಯಲ್ಲಿ ಇಂದು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಸಕಾರಾತ್ಮಕವಾಗಿ ಸ್ಪಂದಿಸಿದ ಪರಿಣಾಮ ಸೆನ್ಸೆಕ್ಸ್ 738 ಅಂಕಗಳ ಏರಿಕೆ ಕಾಣುವ ಮೂಲಕ 23,740ಕ್ಕೆ ಏರಿಕೆಯಾಗಿದೆ. ಇನ್ನು ನಿಫ್ಟಿಯಲ್ಲಿ ಕೂಡ ಏರಿಕೆ ಕಂಡುಬಂದಿದ್ದು, 7 ಸಾವಿರ ಗಡಿ ದಾಟಿ ಪ್ರಸ್ತುತ 7,200 ಅಂಕಗಳ ವಹಿವಾಟಿಗೆ ಅಂತ್ಯಗೊಂಡಿದೆ. ಪ್ರಮುಖವಾಗಿ ಬ್ಯಾಂಕಿಂಗ್ ವಲಯ, ಐಟಿ, ರಿಯಾಲಿಟಿ ವಲಯ, ತಂತ್ರಜ್ಞಾನ ಮತ್ತು ಬಂಡವಾಳ ಸರಕುಗಳ ವಲಯದ ಷೇರುಗಳ ಮೌಲ್ಯದಲ್ಲಿ ಶೇ.4.87ರಷ್ಟು ಏರಿಕೆ ಕಂಡುಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.