ಸಾಂದರ್ಭಿಕ ಚಿತ್ರ 
ವಾಣಿಜ್ಯ

ಫೇಸ್‌ಬುಕ್, ಟ್ವಿಟರ್‌ನಲ್ಲಿ ಹಾಕಿದ ಫೋಟೋ ತರಬಹುದು ನಿಮಗೆ ತೆರಿಗೆ ಪಜೀತಿ

ಇನ್ಮುಂದೆ ಫೇಸ್ ಬುಕ್, ಟ್ವಿಟರ್ ಅಥವಾ ಇನ್‌ಸ್ಟಾಗ್ರಾಂ ನಲ್ಲಿ ಡಿಸೈನರ್ ಡ್ರೆಸ್, ಇನ್ಯಾವುದೇ ದುಬಾರಿ ವಸ್ತುಗಳ ಫೋಟೋ ಹಾಕುವುದಾಗಲೀ ಅಥವಾ ವಿದೇಶ ...

ನವದೆಹಲಿ: ಇನ್ಮುಂದೆ ಫೇಸ್ ಬುಕ್, ಟ್ವಿಟರ್ ಅಥವಾ ಇನ್‌ಸ್ಟಾಗ್ರಾಂ ನಲ್ಲಿ ಡಿಸೈನರ್ ಡ್ರೆಸ್, ಇನ್ಯಾವುದೇ ದುಬಾರಿ ವಸ್ತುಗಳ ಫೋಟೋ ಹಾಕುವುದಾಗಲೀ ಅಥವಾ ವಿದೇಶ ಪ್ರವಾಸದ ಫೋಟೋಗಳನ್ನು ಪೋಸ್ಟ್ ಮಾಡುವ ಮುನ್ನ ಯೋಚಿಸಿ. ಇಂಥಾ ಪೋಸ್ಟ್‌ಗಳು ನಿಮಗೆ ತೆರಿಗೆ ಪಜೀತಿ ತರಬಹುದು!
ಅದು ಹೇಗೆಂದರೆ ನೀವು ಸರಿಯಾಗಿ ತೆರಿಗೆ ಪಾವತಿ ಮಾಡದೇ ಇದ್ದು, ಸಾಮಾಜಿಕ ತಾಣದಲ್ಲಿ ನಿಮ್ಮ ದುಬಾರಿ ವಸ್ತುಗಳ ಅಥವಾ ಐಶಾರಾಮಿ ಜೀವನದ ಫೋಟೋ ಹಾಕಿದರೆ ತೆರಿಗೆ ಇಲಾಖೆ ನಿಮ್ಮ ಮೋಸಗಾರಿಕೆಯನ್ನು ಸುಲಭವಾಗಿ ಪತ್ತೆ ಹಚ್ಚುತ್ತದೆ.
ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್, ಬ್ಯಾಂಕ್ ವ್ಯವಹಾರ ಮಾತ್ರವಲ್ಲ ಸಾಮಾಜಿಕ ತಾಣದಲ್ಲಿನ ನಿಮ್ಮ ಚಟುವಟಿಕೆಗಳ ಮೇಲೆಯೂ ತೆರಿಗೆ ಇಲಾಖೆ ಕಣ್ಣಿಟ್ಟಿರುತ್ತದೆ.
ಇತ್ತೀಚಿನ ವರುಷಗಳಲ್ಲಿ  ಭಾರತದಲ್ಲಿ ನೆಟಿಜನ್‌ಗಳ ಸಂಖ್ಯೆ  ಜಾಸ್ತಿಯಾಗಿದ್ದು, ತೆರಿಗೆ ವಂಚನೆ ಮಾಡುವವರನ್ನು ಪತ್ತೆ ಹಚ್ಚಲು ತೆರಿಗೆ ಇಲಾಖೆ ಸೋಷ್ಯಲ್ ಮೀಡಿಯಾವನ್ನು  ಬಳಸಿಕೊಂಡಿದೆ.
ಒಂದು ವೇಳೆ ಸರಿಯಾಗಿ ತೆರಿಗೆ ಪಾವತಿ ಮಾಡದೆ ವರ್ಷದಲ್ಲಿ ಒಂದೆರಡು ವಿದೇಶ ಪ್ರವಾಸ ಹೋಗಿ ಮೋಜು ಮಸ್ತಿ ಮಾಡಿದ್ದರೆ, ಲೆಕ್ಕವಿಲ್ಲದ ದುಡ್ಡು ಎಲ್ಲಿಂದ ಬಂತು? ಎಂದು ಪ್ರಶ್ನಿಸಲು ತೆರಿಗೆ ಇಲಾಖೆಗೆ ಸುಲಭವಾಗುತ್ತದೆ. ಯಾಕೆಂದರೆ ಆಗಲೇ ವಿದೇಶ ಪ್ರವಾಸ ಹೋಗಿ ಬಂದ ಫೋಟೋಗಳನ್ನು ನೀವು ಫೇಸ್‌ಬುಕ್‌ನಲ್ಲಿ ಹಾಕಿರುತ್ತೀರಿ. ನಿಮ್ಮ ವಿದೇಶ ಪ್ರವಾಸದ ಬಗ್ಗೆ ಅಲ್ಲಿಯೇ ಸಾಕ್ಷ್ಯ ಸಿಕ್ಕಿದಂತಾಯಿತಲ್ಲಾ.  ಆದ್ದರಿಂದ ಇನ್ಮುಂದೆ ಫೇಸ್ ಬುಕ್ ಅಥವಾ ಇನ್ನಿತರ ಸಾಮಾಜಿಕ ತಾಣದಲ್ಲಿ ತಮ್ಮ 'ಗತ್ತು' ಪ್ರದರ್ಶಿಸುವ ಮುನ್ನ ಎಚ್ಚರದಿಂದಿರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!