ನವದೆಹಲಿ: ದೆಹಲಿ ಸರ್ಕಾರ ಜಾರಿಗೆ ತಂದ ಸರಿ-ಬೆಸ ಸಂಖ್ಯೆ ವಾಹನಗಳ ನಿಯಮದಿಂದ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಶೇ.25ರಷ್ಟು ಕುಸಿದಿದೆ.
ಅದರಲ್ಲೂ ಕಾರುಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಬಂಕ್‍ಗಳಲ್ಲಿ ಮತ್ತಷ್ಟು ಕುಸಿದಿದೆ ಎಂದು ಇಲ್ಲಿನ ಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದಾರೆ.
ದೆಹಲಿಯಲ್ಲಿ 400ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‍ಗಳಿದ್ದು ಮಾಸಿಕ ಸರಾಸರಿ 4.70 ಲಕ್ಷ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡುತ್ತವೆ.
ಜನವರಿ ಒಂದರ ನಂತರದಲ್ಲಿ ಈ ಸರಾಸರಿ 3 ಲಕ್ಷ ಲೀಟರ್‍ಗೆ ಇಳಿದಿದೆ ಎಂದು ಹೇಳಿದ್ದಾರೆ. ಜ.15ರವರೆಗೂ ಸರಿ-ಬೆಸ ನಿಯಮ ಜಾರಿಯಲ್ಲಿರಲಿದೆ.