ಮುಂಬೈ ಷೇರು ಮಾರುಕಟ್ಟೆ ಕೇಂದ್ರದ ಚಿತ್ರ 
ವಾಣಿಜ್ಯ

ಕಳೆದ 19 ತಿಂಗಳಲ್ಲೇ ಸೆನ್ಸೆಕ್ಸ್ ಭಾರೀ ಕುಸಿತ; ಏಷ್ಯಾ ಮಾರುಕಟ್ಟೆ ತಲ್ಲಣ

ಕಳೆದ ಒಂದೂವರೆ ವರ್ಷಗಳಲ್ಲಿ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಅತ್ಯಂತ ಕಡಿಮೆ 335 ಅಂಕ...

ಮುಂಬೈ: ಕಳೆದ ಒಂದೂವರೆ ವರ್ಷಗಳಲ್ಲಿ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಅತ್ಯಂತ ಕಡಿಮೆ 335 ಅಂಕ ಕುಸಿತ ಕಂಡುಬಂದಿದ್ದು, ಸೋಮವಾರದ ಬೆಳಗಿನ ವಹಿವಾಟು ಆರಂಭಕ್ಕೆ 24 ಸಾವಿರದ 599ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ ಸಹ 7 ಸಾವಿರದ 500 ಅಂಕಗಳಿಗಿಂತ ಕಡಿಮೆ ಬಂದಿದೆ.

ಚೀನಾ ಮಾರುಕಟ್ಟೆ ಕುಸಿತದ ಭಯ, ಏಷ್ಯಾ ಮಾರುಕಟ್ಟೆಯ ಅಸ್ಥಿರತೆ ಹಾಗೂ ಹಣಕಾಸು ಹೂಡಿಕೆಗಳ ಭಾರೀ ಮಾರಾಟ ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಪ್ರಮುಖ ಲೋಹ, ವಾಣಿಜ್ಯ ಗೂಡ್ಸ್ ಮತ್ತು ಸಾರ್ವಜನಿಕ ವಲಯ ಘಟಕಗಳ ಷೇರುಗಳು ಕುಸಿದಿವೆ.
ಮೊನ್ನೆ ಶುಕ್ರವಾರ ವಹಿವಾಟು ಮುಕ್ತಾಯಕ್ಕೆ ಸೆನ್ಸೆಕ್ಸ್ 82 ಅಂಕಗಳಷ್ಟು ಏರಿಕೆ ಕಂಡುಬಂದಿತ್ತು. ನಿಫ್ಟಿ 7 ಸಾವಿರದ 500 ಅಂಕಗಳವರೆಗೆ ತಲುಪಿತ್ತು.

ಚೀನಾ ದೇಶದ ಆರ್ಥಿಕ ಚಟುವಟಿಕೆ ಕುಸಿತ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಕುಸಿತಕ್ಕೆ ಕಾರಣವಾಗಿದೆ. ಏಷ್ಯಾ ವಲಯದಲ್ಲಿ ಹಾಂಕಾಂಗ್ ನ ಹಾಂಗ್ ಸೆಲ್ ಶೇಕಡಾ 2.61 ಅಂಕಗಳಷ್ಟು ಕುಸಿತ ಕಂಡುಬಂದರೆ ಶಾಂಘೈ ಶೇಕಡಾ 2.40ರಷ್ಟು ಕುಸಿತ ಕಂಡಿದೆ. ಇಂದು ಜಪಾನ್ ಷೇರು ಮಾರುಕಟ್ಟೆ ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗಿದೆ. ಅಮೆರಿಕದ ಡೋವ್ ಜೋನ್ಸ್ ಕೈಗಾರಿಕಾ ವಲಯ ಶೇಕಡಾ 1.02ರಷ್ಟು ಕುಸಿತ ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!