ಫ್ಲಿಫ್ ಕಾರ್ಟ್-ಮಹೀಂದ್ರ ಒಪ್ಪಂದ
ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿದ ಕೆಯುವಿ100 ಕಾರನ್ನು ಆನ್ಲೈನ್ನಲ್ಲಿ ಮಾರಾಟ...
ಬೆಂಗಳೂರು: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿದ ಕೆಯುವಿ100 ಕಾರನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಇ-ಕಾಮರ್ಸ್ ಕಂಪನಿ ಫ್ಲಿಫ್ ಕಾರ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಕಾಂಪ್ಯಾಕ್ಟ್ ಎಸ್ಯುವಿಗೆ ಬುಕಿಂಗ್ ಜನವರಿ 18ರ ಮಧ್ಯರಾತ್ರಿಯಿಂದ ಆರಂಭವಾಗಲಿದೆ. ವಾಹನ ವಲಯದಲ್ಲಿ ಇಂತಹ ಮೊದಲ ಒಪ್ಪಂದವಾಗಿದೆ.
ಇದರೊಂದಿಗೆ ಮಹೀಂದ್ರ ಕಂಪನಿ ತನ್ನ ಗ್ರಾಹಕರನ್ನು ತಲುಪಲು ಫ್ಲಿಫ್ ಕಾರ್ಟ್ ನ ವಿಶಾಲ ಜಾಲವನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಫ್ಲಿಫ್ ಕಾರ್ಟ್ ಕಂಪನಿ ವಾಣಿಜ್ಯ ವಿಭಾಗದ ಉಪಾಧ್ಯಕ್ಷ ಅನಿಲ್ ಗೊಟೇತಿ ಹೇಳಿದ್ದಾರೆ. ಫ್ಲಿಫ್ ಕಾರ್ಟ್ ಕಳೆದ ತಿಂಗಳಷ್ಟೆ ಆಟೋಮೊಬೈಲ್ ವರ್ಗವನ್ನು ಆರಂಭಿಸಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.