ನವದೆಹಲಿ: ವಿಶ್ವದಲ್ಲಿಯೇ ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಪೋನ್ ನೀಡುವುದಾಗಿ ಘೋಷಿಸಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ರಿಂಗಿಂಗ್ ಬೆಲ್ ಸಂಸ್ಥೆ ಈಗ ಅಗ್ಗದ ದರದಲ್ಲಿ ಎಲ್ಇಡಿ ಟಿವಿಯನ್ನು ಬಿಡುಗಡೆ ಮಾಡಿದೆ.
ಬಹು ನಿರೀಕ್ಷಿತ ಪ್ರೀಡಂ-251 ಮೊಬೈಲ್ ಅನ್ನು ನಾಳೆಯಿಂದ ಗ್ರಾಹಕರಿಗೆ ತಲುಪಿಸುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಆದರೆ ಸ್ಮಾರ್ಟ್ ಫೋನ್ ಗ್ರಾಹಕರ ಕೈ ಸೇರುವ ಮುನ್ನವೇ 31.5 ಇಂಜಿನ ಎಚ್ ಡಿ ಎಲ್ಇಡಿ ಟಿವಿ, ನಾಲ್ಕು ಫೀಚರ್ ಫೋನ್ ಗಳು, ಎರಡು ಸ್ಮಾರ್ಟ್ ಫೋನ್ ಹಾಗೂ ಮೂರು ಪವರ್ ಬ್ಯಾಂಕ್ ಗಳನ್ನು ಇಂದು ರಾಷ್ಟ್ರರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ.
ಎಲ್ಇಡಿ ಟಿವಿಯನ್ನು 9,900 ರುಪಾಯಿಗೆ ಮತ್ತು ನಾಲ್ಕು ಭವಿಷ್ಯದ ಫೋನ್ ಗಳಾದ ಹಿಟ್(699 ರು.), ಕಿಂಗ್(899 ರು.), ಬಾಸ್(999 ರು,) ಹಾಗೂ ರಾಜ(1099) ರುಪಾಯಿಗೆ ನೀಡುವುದಾಗಿ ರಿಂಗಿಂಗ್ ಬೆಲ್ ಹೇಳಿದೆ.
ಇನ್ನು ಎಲೆಗಂಟ್ 3ಜಿ ಮತ್ತು ಎಲೆಗಂಟ್ 4 ಎಂಬ ಎರಡು ಸ್ಮಾರ್ಟ್ ಫೋನ್ ಗಳನ್ನು ಸಹ ಬಿಡುಗಡೆ ಮಾಡಲಾಗಿದ್ದು, ಅವುಗಳ ಬೆಲೆ 3,999 ರುಪಾಯಿ ಮತ್ತು 4,999 ರುಪಾಯಿ ಇದೆ.
ಅತಿ ಕಡಿಮೆ ಬೆಲೆಯ ಎಲ್ಇಡಿ ಟಿವಿಯನ್ನು ಆಗಸ್ಟ್ 15ರಿಂದ ನೀಡುವುದಾಗಿ ನೋಯ್ಡಾ ಮೂಲದ ಸಂಸ್ಥೆ ಹೇಳಿಕೊಂಡಿದೆ.