ವಾಣಿಜ್ಯ

ಉಳಿತಾಯದ ಮೇಲಿನ ಹೆಚ್ಚು ಬಡ್ಡಿದರವನ್ನು ಪ್ರಶ್ನಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ

Srinivas Rao BV

ನವದೆಹಲಿ: ಬಾಂಬೆ ಷೇರು ವಿನಿಮಯ ಕೇಂದ್ರದ 140 ನೇ ವರ್ಷಾಚರಣೆಯ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಉಳಿತಾಯದ ಮೇಲೆ ಹೆಚ್ಚಿನ ಬಡ್ಡಿ ನೀಡಲಾಗುತ್ತಿರುವುದನ್ನು ಪ್ರಶ್ನಿಸಿದ್ದಾರೆ.

ಉಳಿತಾಯದ ಹಣಕ್ಕೆ ಹೆಚ್ಚಿನ ಬಡ್ಡಿದರ ನಿಗದಿಪಡಿಸುವುದರಿಂದ ಆರ್ಥಿಕತೆ ಜಡವಾಗುತ್ತದೆ ಎಂದು ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದು, ಆರ್ಥಿಕತೆಯನ್ನು ಜಡಗೊಳಿಸುವ ಉಳಿತಾಯದ ಮೇಲಿನ ಹೆಚ್ಚಿನ ಬಡ್ಡಿದರ ಬೇಕೋ ಅಥವಾ ಆರ್ಥಿಕ ಚಟುವಟಿಕೆಗೆ ಪ್ರಕವಾಗುವ ಬಾಂಡ್, ಷೇರುಗಳು ಹಾಗೂ ಇನ್ನಿತರ ಮೂಲಗಳಿಂದ ಬರುವ ಹೆಚ್ಚಿನ ಆದಾಯ ಬೇಕೋ ಎಂದು ಪ್ರಶ್ನಿಸಿದ್ದಾರೆ. ಸಂಪನ್ಮೂಲಗಳಿರುವೆಡೆಯಿಂದ ಹರಿದುಬರುವ ಹೂಡಿಕೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಮೂಲವಾಗಿದೆ ಎಂದು ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ದಶಕಗಳಿಂದ ಎದುರಾಗಿರುವ ಮೂಲಸೌಕರ್ಯ ಹಾಗೂ ಕೈಗಾರೀಕರಣ ಕೊರತೆಯನ್ನು ಸರಿದೂಗಿಸಲು ಭಾರತದ ಆರ್ಥಿಕತೆಗೆ ದೀರ್ಘಾವಧಿಯ ಹೂಡಿಕೆ ಅಗತ್ಯವಿದ್ದು ಈ ಸಂದರ್ಭದಲ್ಲಿ ಬಿಎಸ್ಇ ಸಂಸ್ಥೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

SCROLL FOR NEXT