ವಾಣಿಜ್ಯ

ಮೋದಿ ಸರ್ಕಾರದ ವಿತ್ತೀಯ ನೀತಿ ದೂರದೃಷ್ಟಿ ಹೊಂದಿದೆ: ಮೌಲ್ಯಮಾಪನಾ ಸಂಸ್ಥೆ ಕ್ರಿಸಿಲ್

Srinivas Rao BV

ನವದೆಹಲಿ: ಮೌಲ್ಯಮಾಪನ ಸಂಸ್ಥೆ ಕ್ರಿಸಿಲ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಗುರಿ ಜನಪ್ರಿಯತೆಯೆಡೆಗೆ ಇಲ್ಲ. ಬದಲಾಗಿ ವ್ಯವಸ್ಥೆಯನ್ನು ಸರಿಪಡಿಸುವ ಹಾಗೂ ಸಾಧ್ಯವಾದಷ್ಟೂ ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತರುವ ಗುರಿ ಹೊಂದಿದೆ ಎಂದು ಕ್ರಿಸಿಲ್ ಮೆಚ್ಚುಗೆ ವ್ಯಕ್ತಪಡಿಸಿದೆ. " ಮೋದಿ ಸರ್ಕಾರದ ವಿತ್ತೀಯ ನೀತಿಗಳು ದೂರದೃಷ್ಟಿ ಹೊಂದಿದೆ ಹಾಗೂ ಭಾರತದ ಬೆಳವಣಿಗೆ ಗುಣಮಟ್ಟವನ್ನು ಹೆಚ್ಚುಸುವ ಗುರಿ ಹೊಂದಿದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರದ ವಿತ್ತೀಯ ನೀತಿ ಹಣದುಬ್ಬರದ ನಡುವೆಯೂ ಭರವಸೆಗಳನ್ನು ಈಡೇರಿಸುವ ಬಗ್ಗೆ ಗಮನ ಕೇಂದ್ರೀಕರಿಸಿದೆ. ಅಷ್ಟೇ ಅಲ್ಲದೆ ಮೂಲಸೌಕರ್ಯ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಜಿಡಿಪಿ ಶೇ. 7.9 ರಷ್ಟು ಬೆಳೆಯಲಿದೆ. 2015-16 ನೇ ಸಾಲಿನಲ್ಲಿ ಶೇ.7.6 ರಷ್ಟಿದ್ದ ಜಿಡಿಪಿ ಬೆಳವಣಿಗೆಗೆ ಹೋಲಿಸಿದರೆ 2016-17 ನೇ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ಶೇ.7.9 ರಾಷ್ಟಾಗಲಿದೆ ಎಂದು ಕ್ರಿಸಿಲ್ ಅಂದಾಜಿಸಿದೆ. 
ಮುಂಗಾರು ಪ್ರಸಕ್ತ ಆರ್ಥಿಕ ವರ್ಷದ ನಿರ್ಣಾಯಕ ಭಾಗವಾಗಲಿದ್ದು ಕಳೆದ ವರ್ಷದಲ್ಲಿ ಮುಂಗಾರು ಕ್ಷೀಣಿಸಿದ್ದರ ಪರಿಣಾಮ ಬೆಳವಣಿಗೆ ಕುಂಠಿತವಾಗಿತ್ತು. ಹಲವು ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಧಾರ್ ಮಸೂದೆ ಮೂಲಕ ಅನುದಾನ, ಗ್ರಾಮೀಣ ಜನರಿಗೆ ವೇತನ, ಪಿಂಚಣಿಯನ್ನು ಎಲೆಕ್ಟ್ರಾನಿಕ್ ವೇದಿಕೆ ಮೂಲಕ ತಲುಪಿಸುವ ವ್ಯವಸ್ಥೆ ಕೈಗೊಂಡಿದೆ ಎಂದು ಕ್ರಿಸಿಲ್ ಹೇಳಿದೆ.

SCROLL FOR NEXT