ವಾಣಿಜ್ಯ

ಟೆಕ್ಕಿ ಉದ್ಯೋಗ ನೇಮಕಾತಿಯಲ್ಲಿ ಇಳಿಕೆ: ಭವಿಷ್ಯ ಕುರಿತು ಐಟಿ ಆಕಾಂಕ್ಷಿಗಳ ಆತಂಕ

Srinivas Rao BV

ಚೆನ್ನೈ: ಐಟಿ ಕ್ಷೇತ್ರದಲ್ಲಿ ರೋಬೋಟ್ ಗಳು ಮಾಡಲು ಸಾಧ್ಯವಾಗದ ಕೆಲಸಗಳಿಗೆ ಮಾತ್ರ ಇನ್ನು ಮುಂದಿನ ದಿನಗಳಲ್ಲಿ ನೇಮಕಾತಿ ನಡೆಯಲಿದ್ದು, ಅಟೋಮೇಷನ್ ನ ಪರಿಣಾಮ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದರಿಂದ  ಭವಿಷ್ಯ ಕುರಿತು ಐಟಿ ಆಕಾಂಕ್ಷಿಗಳಲ್ಲಿ ಆತಂಕ ಎದುರಾಗಿದೆ.

ಐಟಿ ಕ್ಷೇತ್ರದಲ್ಲಿ ಅಟೋಮೇಷನ್ ನ ಪರಿಣಾಮ ಸತತ ಮೂರನೇ ವರ್ಷ ಉದ್ಯೋಗ ನೇಮಕಾತಿ ಕುಸಿಯಲಿದೆ ಎಂದು ಉದ್ಯಮ ಸಂಸ್ಥೆ ನಾಸ್ಕಾಮ್ ಅಧ್ಯಕ್ಷ ಆರ್ ಚಂದ್ರಶೇಖರ್ ಮಾಹಿತಿ ನೀಡಿದ್ದು, ಇದು ಐಟಿ ಉದ್ಯೋಗದಲ್ಲಿ ನೇಮಕಾತಿ ಕುಸಿತ ಕಾಣುವ ಬಗ್ಗೆ ನಾಸ್ಕಾಮ್ ನೀಡಿರುವ ಎರಡನೇ ಎಚ್ಚರಿಕೆಯಾಗಿದೆ.

ಈ ಹಿಂದೆ ನಾಸ್ಕಾಮ್ ಅಧ್ಯಕ್ಷರಾಗಿದ್ದ ಸಿಪಿ ಗುರ್ನಾನಿ ಅವರು ಐಟಿ ಉದ್ಯೋಗಗಳಲ್ಲಿ ಶೇ.20 ರಷ್ಟು ಕಡಿಮೆಯಾಗಲಿದೆ ಎಂದು ಹೇಳಿದ್ದರು. ಐಟಿ ಕಂಪನಿಗಳ ಲಾಭವು ಕಡಿಮೆಯಾಗುತ್ತಿರುವುದರಿಂದ ಕಂಪನಿಗಳು ಅಟೋಮೇಷನ್ ಮೊರೆ ಹೋಗಿದ್ದು ನೇಮಕಾತಿ ಕಡಿಮೆಯಾಗುತ್ತಿದೆ. ಪರಿಣಾಮ ಭವಿಷ್ಯದ ಐಟಿ ಆಕಾಂಕ್ಷಿಗಳಲ್ಲಿ ಆತಂಕ ಮೂಡಿದೆ.

SCROLL FOR NEXT