ಭಾರತ ಸರ್ಕಾರದ ಒಂದು ಕ್ರಾಂತಿಕಾರಿ ಯೋಜನೆಯಡಿಯಲ್ಲಿ ವಾರ್ಷಿಕವಾಗಿ ಸಲ್ಲಿಸುವ ಜೀವನ ಪ್ರಮಾಣ ಪತ್ರಗಳನ್ನು ಸುಲಭಗೊಳಿಸಿದೆ, ಅದುವೆ ಜೀವನ ಪ್ರಮಾಣ ಪತ್ರ. ಈ ಬಯೋಮೆಟ್ರಿಕ್ ಸೌಲಭ್ಯವನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರಕ್ಷಣಾ ಇಲಾಖೆ ಅಥವಾ ಯಾವುದೇ ಇತರ ಸರ್ಕಾರಿ ಸಂಸ್ಥೆಯ ಪಿಂಚಣಿದಾರರಿಗೆ ಪರ್ಯಾಯವಾಗಿ ಒಂದು ಅನುಕೂಲಕರ ಮತ್ತು ತೊ೦ದರೆ ಮುಕ್ತ ರೀತಿಯಲ್ಲಿ ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಲು ರಚಿಸಲಾಗಿದೆ. ಜೀವನ ಪ್ರಮಾಣವು ಆನ್ಲೈನ್ ಬಯೋಮೆಟ್ರಿಕ್ ದೃಢೀಕರಣದಲ್ಲಿ ಆಧಾರ್ ವೇದಿಕೆಯನ್ನು ಬಳಸಲಾಗುತ್ತದೆ. ಭವಿಷ್ಯದಲ್ಲಿ ಪಿಂಚಣಿದಾರರು ದೈಹಿಕವಾಗಿ ತಮ್ಮನ್ನು ದೃಢೀಕರಿಸಲು ದೃಢೀಕರಣ ಪ್ರಾಧಿಕಾರದ ಮು೦ದೆ ತಮ್ಮನ್ನು ತಾವು ಖುದ್ದಾಗಿ ಹಾಜರಾಗುವ ಅಗತ್ಯವಿರುವುದಿಲ್ಲ. ಈ ಸೌಲಭ್ಯ ಪಿಂಚಣಿದಾರರಿಗೆ ಅನಗತ್ಯ ಆಡಳಿತಾತ್ಮಕ ಅಡಚಣೆಗಳಿಂದ ಮುಕ್ತಗೊಳಿಸಲು ಸಹಾಯಕಾರಿಯಾಗಿದೆ.
ನೌಕರರ ಭವಿಷ್ಯ ನಿಧಿ ಸ೦ಘಟನೆಬಹು ದೊಡ್ಡ ಸಾಮಾಜಿಕ ಭದ್ರತೆ ಸಂಸ್ಥೆಯಾಗಿದ್ದು ನೌಕರರ ಪಿಂಚಣಿ ಯೋಜನೆ 1995ರ ಅಡಿಯಲ್ಲಿ ತನ್ನ ಎಲ್ಲಾ ಪಿಂಚಣಿದಾರರಿಗೆ ಈ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ನೌಕರರ ಪಿಂಚಣಿಯ ಯೋಜನೆ ಪಿಂಚಣಿದಾರರು ತಮ್ಮಜೀವನ್ ಪ್ರಮಾಣ ಪತ್ರವನ್ನು ತಮ್ಮ ಪಿಂಚಣಿ ವಿತರಣೆ ಬ್ಯಾಂಕ್ ಶಾಖೆಗೆ ಖುದ್ದಾಗಿ ಹಾಜರಾಗಿ ಅಥವಾ ಗೊತ್ತುಪಡಿಸಿದ ಜೀವನ್ ಪ್ರಮಾಣ ಕೇಂದ್ರಗಳ ಮೂಲಕ ಪ್ರತಿವರ್ಷ ನವೆಂಬರ್ ತಿ೦ಗಳಿನಲ್ಲಿ ತಮ್ಮ ಜೀವನ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದು. ಜೀವನ ಪ್ರಮಾಣ ಕೇಂದ್ರಗಳ ಪಟ್ಟಿ ಪ್ರದೇಶದ ಪಿನ್ ಕೋಡ್ ಆಧರಿಸಿ ಜೀವನ ಪ್ರಮಾಣ ಪೋರ್ಟಲ್ ಮೂಲಕ ಪಡೆಯಬಹುದಾಗಿದೆ.
ಈ ಪ್ರಕ್ರಿಯೆಯ ಒಂದು ಭಾಗವಾಗಿ, ಪಿಂಚಣಿದಾರರು ತಮ್ಮ ಕ್ಷೇತ್ರದ ಮತ್ತು ಕಚೇರಿಯ ಕೋಡ್ ಜೊತೆಗೆ ತಮ್ಮ ಪಿಂಚಣಿ ಪಾವತಿ ಆದೇಶ ಸಂಖ್ಯೆ (PPO) ,ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಪಿಂಚಣಿ ಪಡೆಯುತ್ತಿರುವ ಬ್ಯಾಂಕ್ ಖಾತೆಯ ಖಾತೆ ಸಂಖ್ಯೆಯನ್ನು ಒದಗಿಸಿ ತಮ್ಮನ್ನು ತಾವು ಬಯೋಮೆಟ್ರಿಕ್ ಮೂಲಕ ಬೆರಳಚ್ಚು ಅಥವಾ ಕಣ್ಣಿನ ಅಚ್ಚನ್ನು (ಐರಿಸ್ ಅನ್ನು) ಒದಗಿಸಿ ದೃಢೀಕರಿಸಬೇಕು. ಈ ಪ್ರಕ್ರಿಯೆಯಿ೦ದ ನೋ೦ದಣಿ ಮಾಡಿರುವ ಮಾಹಿತಿಯು ಅನುಮೋದನೆಗಾಗಿ ನೌಕರರ ಭವಿಷ್ಯ ನಿಧಿ ಸ೦ಘಟನೆಯ ಕಚೇರಿಯಲ್ಲಿ ಅಪ್ಲೋಡ್ ಆಗುತ್ತದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆಯ, ಪ್ರಾದೇಶಿಕ ಕಛೇರಿ ಬೆಂಗಳೂರು ಸೇರಿದ೦ತೆ ರಾಜ ರಾಜೇಶ್ವರಿನಗರ ಮತ್ತು ಯಲಹಂಕ ಉಪ ಪ್ರಾದೇಶಿಕ ಕಚೇರಿಗಳನ್ನು ಒಳಗೊ೦ಡು 11,604 ಜೀವನ್ ಪ್ರಮಾಣ ಪತ್ರಗಳನ್ನು ಜೀವನ್ ಪ್ರಮಾಣ ಮೂಲಕ ಜನವರಿ 2016 ನಿ೦ದ ಇಲ್ಲಿಯವರೆಗೆ ಪಡೆದಿರುತ್ತದೆ. ಭವಿಷ್ಯದಲ್ಲಿ, ನೌಕರರ ಪಿಂಚಣಿಯ ಯೋಜನೆಯ ಎಲ್ಲಾ ಪಿಂಚಣಿದಾರರು ಅವರ ಜೀವನವನ್ನು ಪ್ರಮಾಣ ಪತ್ರಗಳನ್ನು ಸಲ್ಲಿಸುವ ಮೂಲಕ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.