ನವದೆಹಲಿ: ಚಿನಿವಾರ ಪೇಟೆಯಲ್ಲಿ ಹಳದಿ ಲೋಹದ ಬೆಲೆ ಗುರುವಾರ ಪ್ರತಿ 10 ಗ್ರಾಂಗೆ 31 ಸಾವಿರ ರೂಪಾಯಿ ದಾಟಿದ್ದು, 600 ರೂಪಾಯಿಯಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೆಡರಲ್ ರಿಸರ್ವ್ ನಲ್ಲಿ ದರ ಏರಿಕೆಯಾಗಿರುವುದರಿಂದ, ಈಕ್ವೆಟಿ ಷೇರಿನ ಕುಸಿತ ಮತ್ತು ಕರೆನ್ಸಿ ಮಾರುಕಟ್ಟೆ ಏರಿಳಿತ ಚಿನ್ನದ ಬೆಲೆ ಏರಿಕೆಯಾಗಲು ಕಾರಣವಾಗಿದೆ.
ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಶೇಕಡಾ 10.80ರಷ್ಟು ಹೆಚ್ಚಾಗಿದೆ.