ನವದೆಹಲಿ: ಮಾರ್ಚ್ 24 ರಿಂದ ಬ್ಯಾಂಕ್ ವಲಯಕ್ಕೆ ಸುದೀರ್ಘ 4 ದಿನಗಳ ರಜೆ ಇದ್ದು ಎಲ್ಲಾ ಬ್ಯಾಂಕ್ ಗಳು ಮಚ್ಚಲ್ಪಡುತ್ತವೆ.
ಮಾರ್ಚ್ 24 ರಂದು ಹೋಳಿ, 25 ರಂದು ಗುಡ್ ಫ್ರೈಡೇ, ಮಾರ್ಚ್ 26 ರಂದು 4ನೇ ಶನಿವಾರ ಹಾಗೂ ಮಾರ್ಚ್ 27 ಭಾನುವಾರ ಸರ್ಕಾರಿ ರಜೆ ಕಾರಣ, 4 ದಿನಗಳ ಕಾಲ ಬ್ಯಾಂಕ್ ವಹಿವಾಟು ಸ್ಥಗಿತಗೊಳ್ಳಲಿದೆ. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಗಳಿಗೆ ಸರ್ಕಾರಿ ರಜೆ ಇರುವುದರಿಂದ, 4ನೇ ಶನಿವಾರವಾದ ಮಾರ್ಚ್ 26 ರಂದು ರಜೆ ಸಿಗಲಿದೆ.
ನಾಲ್ಕು ದಿನಗಳ ರಜೆ ಇರುವ ಕಾರಣ ವ್ಯಾಪಾರ ವಹಿವಾಟಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗಲಿದ್ದು. ಎಟಿಎಂ ಗಳು ಕೂಡ ಹಣದ ಕೊರತೆ ಎದುರಿಸುವ ಸಾಧ್ಯತೆಯಿದೆ.