ವಾಣಿಜ್ಯ

ನೀರಸ ಏಷ್ಯಾ ಮಾರುಕಟ್ಟೆ ಪರಿಣಾಮ: ಸೆನ್ಸೆಕ್ಸ್ 40 ಅಂಕ ಕುಸಿತ

Srinivasamurthy VN

ಮುಂಬೈ: ಏಷ್ಯಾ ಮಾರುಕಟ್ಟೆಯ ನೀರಸ ವಹಿವಾಟು ಪ್ರಕ್ರಿಯೆ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 40 ಅಂಕಗಳಷ್ಟು  ಕುಸಿತಕಂಡಿದೆ.

ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಇಳಿಕೆಯತ್ತ ಮುಖ ಮಾಡಿದ್ದು, ಏಷ್ಯಾ ಮಾರುಕಟ್ಟೆಯ ನೀರಸ ವಹಿವಾಟು ಪ್ರಕ್ರಿಯೆಯೇ ಇದಕ್ಕೇ ಕಾರಣ ಎಂದು ಹೇಳಲಾಗುತ್ತಿದೆ. ಮಧ್ಯಾಹ್ನ 12.30ರ ಹೊತ್ತಿಗೆ  ಸೆನ್ಸೆಕ್ಸ್ 40.43 ಅಂಕಗಳನ್ನು ಕಳೆದುಕೊಂಡು 24,925.97 ಅಂಕಗಳಿಗೆ ಸ್ಥಿರವಾಗಿದೆ. ಇನ್ನು ನಿಫ್ಟಿ ಕೂಡ 9.45 ಅಂಕಗಳನ್ನು ಕಳೆದುಕೊಂಡು 7,605.65ಕ್ಕೆ ಸ್ಥಿರವಾಗಿದೆ.

ಪ್ರಮುಖವಾಗಿ ಔಷಧ ವಲಯದ ಷೇರುಗಳಿಗೆ ಹೆಚ್ಚಿನ ನಷ್ಟವಾಗಿದ್ದು, ಷೇರುಗಳ ಮೌಲ್ಯದಲ್ಲಿ ಶೇ.3ರಷ್ಟು ಇಳಿಕೆ ಕಂಡುಬಂದಿದೆ. ಉಳಿದಂತೆ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಮಾರುತಿ,  ರಿಲಯನ್ಸ್ ಮತ್ತು ಆಕ್ಸಿಸ್ ಬ್ಯಾಂಕುಗಳ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಈ ಸಂಸ್ಥೆಗಳ ಲಾಭಾಂಶ ಪಡೆದ ಪ್ರಮುಖ ಸಂಸ್ಥೆಗಳಾಗಿವೆ.

SCROLL FOR NEXT