ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಯುಬಿ ಹೊಲ್ಡಿಂಗ್ಸ್ ನಿರ್ದೇಶಕ ಹುದ್ದೆಗೆ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ರಾಜಿನಾಮೆ

ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ಅವರು ಯುನೈಟೆಡ್...

ಸಿದ್ಧಾರ್ಥ
Lingaraj Badiger
Updated On : 1 Apr 2016, 7:57 am
ಮುಂಬೈ: ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ಅವರು ಯುನೈಟೆಡ್ ಬ್ರೇವರೀಸ್ (ಹೋಲ್ಡಿಂಗ್ಸ್) ಲಿಮಿಟೆಡ್ ನ ನಿರ್ದೇಶಕ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. 
ಸಿದ್ಧಾರ್ಥ ಮಲ್ಯ ಅವರು ಯುನೈಟೆಡ್ ಬ್ರೇವರೀಸ್ (ಹೋಲ್ಡಿಂಗ್ಸ್) ಲಿಮಿಟೆಡ್(ಯುಬಿಎಚ್ಎಲ್)ನ ನಾನ್ ಎಕ್ಸಿಕ್ಯುಟಿವ್, ನಾನ್ ಇಂಡಿಪೆಂಡೆಂಟ್ ನಿರ್ದೇಶ ಸ್ಥಾನವನ್ನು ಮಾರ್ಚ್ 31ರಿಂದ ಜಾರಿಗೆ ಬರುವಂತೆ ತೆರವುಗೊಳಿಸಿದ್ದಾರೆ ಎಂದು ಯುಬಿಎಚ್ಎಲ್ ಶುಕ್ರವಾರ ಬಾಂಬೆ ಸ್ಟಾಕ್ ಎಕ್ಸಚೆಂಜ್ ಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯ್ ಮಲ್ಯ ಅವರು ಟ್ವಿಟರ್ ಮೂಲಕ ನನ್ನ ತಪ್ಪಿಗೆ ನನ್ನ ಮಗನನ್ನು ದೂರಬೇಡಿ ಎಂದು ಹೇಳಿದ ಬೆನ್ನಲ್ಲೇ ಸಿದ್ಧಾರ್ಥ ಮಲ್ಯ ಅವರು ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

Advertisement

Advertisement

'ನನ್ನ ಮಗ ಸಿದ್ಧಾರ್ಥನನ್ನು ಈ ವಿವಾದದಲ್ಲಿ ಎಳೆದು ತರಬೇಡಿ. ನನ್ನ ವ್ಯವಹಾರದ ಜೊತೆ ಆತ ಯಾವುದೇ ಸಂಬಂಧ ಹೊಂದಿಲ್ಲ. ಸುಮ್ಮನೆ ಅವನ ವಿರುದ್ಧ ವೃಥಾ ಆರೋಪ ಹೊರಿಸಬೇಡಿ ಎಂದು ವಿಜಯ್ ಮಲ್ಯ ಟ್ವಿಟ್ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments