ನವದೆಹಲಿ: ಸಗಟು ಹಣದುಬ್ಬರ 17 ತಿಂಗಳ ನಂತರ ಧನಾತ್ಮಕ ಮಟ್ಟಕ್ಕೆ ಏರಿದ್ದು, ತರಕಾರಿ, ಬೇಳೆ ಕಾಲುಗಳ ಬೆಲೆ ಏರಿಕೆಯಿಂದ ಏಪ್ರಿಲ್ ನ ಹಣದುಬ್ಬರ ದರ ಶೇ.0 .34 ರಷ್ಟಾಗಿದೆ.
ಮಾರ್ಚ್ ತಿಂಗಳಲ್ಲಿ ಋಣಾತ್ಮಕ ವಲಯದ ಲ್ಲೇ ಮುಂದುವರೆದಿದ್ದ ಹಣದುಬ್ಬರ ದರ ಶೇ.(-)0 .85 ರಷ್ಟಿತ್ತು. ಮೇ.16 ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳಿವೆ. ಇನ್ನು ಮಾಸಿಕ ಸಗಟು ಹಣದುಬ್ಬರ ಆಧಾರಿತ ವಾರ್ಷಿಕ ಹಣದುಬ್ಬರದ ದರ ಶೇ.0 .36 ಕ್ಕೆ ತಲುಪಿದೆ.
ಋಣಾತ್ಮಕ ವಲಯದಲ್ಲೇ ಇದ್ದ ಕಳೆದ ವರ್ಷದ ಏಪ್ರಿಲ್ ನ ಹಣದುಬ್ಬರ ಏರಿಕೆಯು ಶೇ.(-)2 .43 ರಷ್ಟಿತ್ತು. ಇದು ಒಟ್ಟಾರೆ ಹಣದುಬ್ಬರದ ಮಾಹಿತಿಯಾದರೆ ಮಾರ್ಚ್ ನಲ್ಲಿ ಶೇ.3 .73 ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರ ಏಪ್ರಿಲ್ ನಲ್ಲಿ ಶೇ.4 .23 ರಷ್ಟಾಗಿದೆ. ತರಕಾರಿ ಹಾಗೂ ಬೇಳೆಕಾಳುಗಳ ಹಣದುಬ್ಬರ ಅನುಕ್ರಮವಾಗಿ ಶೇ.2 .೨೧(ಮಾರ್ಚ್ ನಲ್ಲಿ ಶೇ - 2.26 ), 34 .45 (ಮಾರ್ಚ್ ನಲ್ಲಿ ಶೇ.-36 .36 ) ರಷ್ಟಾಗಿದೆ.
ತರಕಾರಿ, ಬೇಳೆ ಕಾಲುಗಳ ಹಣದುಬ್ಬರ ಏರಿಕೆಯಾಗಿದ್ದರೂ, ದಿನನಿತ್ಯ ಸೇವಿಸುವ ಪದಾರ್ಥಗಳಾದ ಇರುಳಲಿ ಹಾಗೂ ಹಣ್ಣುಗಳ ಬೆಲೆ ಇಳಿಕೆಯಾಗಿದೆ. ಕಳೆದ ವಾರ ಬಿಡುಗಡೆಯಾಗಿದ್ದ ಅಂಕಿ ಅಂಶಗಳ ಪ್ರಕಾರ ಚಿಲ್ಲರೆ ಹಣದುಬ್ಬರದಲ್ಲಿ ಶೇ 5.39ರಷ್ಟು ಏರಿಕೆಯಾಗಿತ್ತು.